• Slide
    Slide
    Slide
    previous arrow
    next arrow
  • ಸೆ.27 ರಿಂದ ’ಸ್ವಚ್ಛತಾ ಸೆ ಸಂಪನ್ನತಾ’ ಕಾರ್ಯಕ್ರಮ

    300x250 AD

    ನವದೆಹಲಿ: 75 ವರ್ಷಗಳ ಪ್ರಗತಿಶೀಲ ಭಾರತ ಮತ್ತು ಅದರ ಭವ್ಯ ಇತಿಹಾಸವನ್ನು ಆಚರಿಸಲು ಹಾಗೂ ಸ್ಮರಿಸಲು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಆಜಾದಿ ಕಾ ಅಮೃತ ಮಹೋತ್ಸವ್‌’ ಆಚರಣೆಯ ಭಾಗವಾಗಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3, 2021ರವರೆಗೆ ಭಾರತದಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 2021ರ ಅಕ್ಟೋಬರ್ 1 ರಂದ ಪ್ರಧಾನಮಂತ್ರಿ ಮೋದಿ ಅವರು ʻಸ್ವಚ್ಛ ಭಾರತ ಯೋಜನೆ-ನಗರ 2.0ʼ ಮತ್ತು ʻಅಮೃತ್- 2.0ʼಗೆ ಚಾಲನೆ ನೀಡಲಿದ್ದಾರೆ.

    ʻಆಜಾದಿ ಕಾ ಅಮೃತ್ ಮಹೋತ್ಸವ್‌ʼ (India@75) – ಇದು ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳ ಸರಣಿಯಾಗಿದೆ. ಜನ-ಭಾಗೀದಾರಿ ಸ್ಫೂರ್ತಿಯೊಂದಿಗೆ ಮಹೋತ್ಸವವನ್ನು ಜನರ-ಉತ್ಸವವಾಗಿ ಆಚರಿಸಲಾಗುವುದು.

    ಪ್ರಧಾನಿ ಮೋದಿ ಅವರು 2021 ರ ಅಕ್ಟೋಬರ್ 1ರಂದು ಸ್ವಚ್ಛ ಭಾರತ ಯೋಜನೆ-ನಗರ 2.0 ಕ್ಕೆ ಚಾಲನೆ ನೀಡಲಿದ್ದಾರೆ.

    ಸ್ವಚ್ಛ ಭಾರತ ಯೋಜನೆ-ನಗರ (ಎಸ್‌ಬಿಎಂ-ಯು) ಅಭಿಯಾನದ 7ನೇ ವರ್ಷಾಚರಣೆ ಅಂಗವಾಗಿ ಸಚಿವಾಲಯವು “ಸ್ವಚ್ಛತಾ ಸೆ ಸಂಪನ್ನತʼʼ ಕಾರ್ಯಕ್ರಮವನ್ನು 2021ರ ಸೆಪ್ಟೆಂಬರ್ 27ರಂದು ಆಯೋಜಿಸಲಿದ್ದು, ಅಲ್ಲಿ ‘ಸ್ವಚ್ಛತಾ ಆ್ಯಪ್ 2.0’ ಮತ್ತು ‘ಸ್ವಚ್ಛ ಸರ್ವೇಕ್ಷಣ್ 2022’ ಗೆ ಚಾಲನೆ ನೀಡಲಾಗುವುದು. ಅದೇ ದಿನ ‘ಕಚರಾ ಅಲಗ್ ಕರೋ ಅಮೃತ್ ದಿವಸ್’ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಭಾರತದಾದ್ಯಂತ, ನಗರ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿ) ವತಿಯಿಂದ ವಾರ್ಡ್‌ಗಳು/ನಿವಾಸಿಗಳ ಶ್ರೇಯೋಭಿವೃದ್ಧಿ ಸಂಘಗಳಲ್ಲಿ (ಆರ್‌ಡಬ್ಲ್ಯೂಎ) ಮೂಲದಲ್ಲೇ ತ್ಯಾಜ್ಯ ಬೇರ್ಪಡಿಸುವಿಕೆ ಬಗ್ಗೆ ಸ್ವಚ್ಚಗ್ರಾಹಿಗಳ ತಂಡಗಳು ಮನೆ ಮನೆಗೆ ತೆರಳಿ ಅಭಿಯಾನವನ್ನು ಕೈಗೊಳ್ಳಲಿದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ನಿವಾಸಿಗಳ ಶ್ರೇಯೋಭಿವೃದ್ಧಿ ಸಂಘಗಳು, ಕೊಳೆಗೇರಿ ಅಭಿವೃದ್ಧಿ ಪ್ರಾಧಿಕಾರಗಳು ಮತ್ತು ಇತರರಿಗೆ ಆ ದಿನದಂದ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ʻಸಾರ್ವಜನಿಕ್ ಶೌಚಾಲಯ್‌ ಸಫಾಯಿ ಜನ್ ಭಾಗಿದಾರಿ ಅಮೃತೋತ್ಸವʼವನ್ನು 2021ರ ಸೆಪ್ಟೆಂಬರ್ 28-29ರ ಅವಧಿಯಲ್ಲಿ ಆಚರಿಸಲಾಗುವುದು. ಇದರ ಅಡಿಯಲ್ಲಿ ನಾಗರಿಕರಿಂದ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು.

    ಸಫಾಯಿಮಿತ್ರ ಸಮ್ಮಾನ್ ಅಮೃತ್ ಸಮಾರೋಹ್ ಅನ್ನು ಅಕ್ಟೋಬರ್ 2 ಮತ್ತು 3 ರಂದು ಆಯೋಜಿಸಲಾಗುವುದು. ಅಲ್ಲಿ ಸಫಾಯಿಮಿತ್ರರೊಂದಿಗೆ ವಾಸ್ತವಿಕ ಸಂವಾದ ಮತ್ತು ಸಾಲ ವಿತರಣೆ ನಡೆಯಲಿದೆ. ಜೊತೆಗೆ ನಾಗರಿಕರನ್ನು ಸಂವೇದನಾಶೀಲರನ್ನಾಗಿಸಲು ಡಿಜಿಟಲ್ ಪ್ರದರ್ಶನಗಳು ಇರಲಿವೆ. ತ್ಯಾಜ್ಯ ಸಂಸ್ಕರಣಾ ಉದ್ಯಮಿಗಳಿಗೆ ಸನ್ಮಾನ, ಮತ್ತು ತ್ಯಾಜ್ಯದಿಂದ ಕಲಾ ಪ್ರದರ್ಶನಗಳು/’ಬರ್ತಾನ್ ಭಂಡಾರ್’ಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

    ಪ್ರಧಾನಿ ಮೋದಿ ಅವರು 2021 ರ ಅಕ್ಟೋಬರ್ 1 ರಂದು ಅಮೃತ್ 2.0 ಗೆ ಚಾಲನೆ ನೀಡಲಿದ್ದಾರೆ. ʻಅಟಲ್ ಮಿಷನ್ ಫಾರ್ ರಿಜುವೇಶನ್ ಅಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಶನ್ʼ (ಅಮೃತ್) ಮೊದಲ ಕೇಂದ್ರೀಕೃತ ರಾಷ್ಟ್ರೀಯ ಜಲ ಯೋಜನೆಯಾಗಿದ್ದು, 60% ನಗರ ಜನಸಂಖ್ಯೆಯನ್ನು ಒಳಗೊಂಡ 500 ನಗರಗಳಲ್ಲಿ 2015ರ ಜೂನ್ 25 ರಂದು ಮೊದಲ ಬಾರಿಗೆ ಇದನ್ನು ಜಾರಿಗೊಳಿಸಲಾಯಿತು. 1 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ನಗರಗಳು ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಕೊಳಾಯಿ ಮೂಲಕ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಮತ್ತು ಕೊಳಚೆ ನೀರು ನಿರ್ವಹಣೆಯನ್ನು ಒದಗಿಸುವತ್ತ ಈ ಯೋಜನೆಯು ಪ್ರಮುಖವಾಗಿ ಗಮನ ಹರಿಸುತ್ತದೆ. ಮಳೆ ನೀರಿನ ಚರಂಡಿ, ವಾಹನರಹಿತ ನಗರ ಸಾರಿಗೆ ಮತ್ತು ಹಸಿರು ಸ್ಥಳಗಳು ಹಾಗೂ ಉದ್ಯಾನವನಗಳು ಈ ಯೋಜನೆಯ ಇತರ ಘಟಕಗಳಾಗಿವೆ.

    ಸಪ್ತಾಹದ ವಾರದಲ್ಲಿ ʻಎಲ್ಲರಿಗೂ ವಸತಿʼ (ಎಚ್‌ಎಫ್‌ಎ) ಕುರಿತು ವಿವಿಧ ಕಾರ್ಯಕ್ರಮಗಳನ್ನು ಸಚಿವಾಲಯವು ಆಯೋಜಿಸಿದೆ. ನಗರ ಭೂದೃಶ್ಯದಲ್ಲಿ ವಸತಿ ಕುರಿತ ವ್ಯಾಪಕ ವಿಷಯದ ಬಗ್ಗೆ ಬ್ಯಾಂಕುಗಳು/ಶಿಕ್ಷಣ ಸಂಸ್ಥೆಗಳಿಂದ ಕಾರ್ಯಾಗಾರ ʻಆವಾಸ್ ಪರ್ ಸಂವಾದ್ʼ ಮುಂತಾದವು ಇದರಲ್ಲಿ ಸೇರಿವೆ. ಪ್ರತಿಯೊಂದು ʻಲೈಟ್ ಹೌಸ್ ಯೋಜನೆ (ಎಲ್‌ಎಚ್‌ಪಿ) ಸ್ಥಳಕ್ಕೆ 75 ಟೆಕ್ನೋಗ್ರಾಹಿಗಳ ಭೇಟಿ ಕೈಗೊಳ್ಳಲಾಗುವುದು. ಭಾರತದಾದ್ಯಂತ ಪಿಎಂಎಇ(ಯು) ಫಲಾನುಭವಿಗಳು ಹಣ್ಣು ಮತ್ತು ಔಷಧೀಯ ಸಸ್ಯಗಳನ್ನು ನೆಡಬಹುದು. ʻಮಾದರಿ ಹಿಡುವಳಿ ಕಾಯ್ದೆ(ಎಂಟಿಎ) ಮೂಲಕ ಬಾಡಿಗೆ ವಸತಿಯ ಪರಿವರ್ತನೆʼ ಕುರಿತು ಈ ವಾರದುದ್ದಕ್ಕೂ ರಾಷ್ಟ್ರದಾದ್ಯಂತ ಚರ್ಚೆಗಳನ್ನು ಏರ್ಪಡಿಸಲಾಗುತ್ತಿದೆ. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ನಿರ್ಮಿಸಲಾದ ಫಲಾನುಭವಿ ನೇತೃತ್ವದಲ್ಲಿ ನಿರ್ಮಾಣಗೊಂಡ ಮನೆಗಳನ್ನು (ಬಿಎಲ್‌ಸಿ) ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳು ಅಧಿಕಾರಿಗಳು ವಾಸ್ತವಿಕವಾಗಿ ತಪಾಸಣೆ ನಡೆಸುವ ʻಲಾಬಾರ್ಥಿಯೋನ್ ಸೆ ರುಬಾರೂನ್’ ಅಭಿಯಾನವನ್ನೂ ಸಚಿವಾಲಯವು ಪ್ರಾರಂಭಿಸಲಿದೆ. ʻಪ್ರಧಾನ ಮಂತ್ರಿ ನಗರ ಆವಾಸ್‌ ಯೋಜನೆʼಯ ಮಹಿಳಾ ಫಲಾನುಭವಿಗಳ ಯಶೋಗಾಥೆ ಕುರಿತ ‘ಮೈ ಭೀ ಆತ್ಮನಿರ್ಭರ್’ ಕಿರುಚಿತ್ರವನ್ನು ಸಚಿವಾಲಯದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಾಗುವುದು.

    ಟ್ಯಾಕ್ಟಿಕಲ್ ಅರ್ಬನಿಸಂ ಪ್ರಾಜೆಕ್ಟ್ಸ್ (ತಂತ್ರೋಪಾಯದ ನಗರೀಕರಣ ಯೋಜನೆ) ಕುರಿತು ಕಾರ್ಯಕ್ರಮ ನಡೆಸಲಾಗುತ್ತದೆ (22 ನಗರಗಳಲ್ಲಿ ತಲಾ 75 ಗಂಟೆಗಳು). ಸಾರ್ವಜನಿಕ ಸ್ಥಳಗಳಲ್ಲಿ ಹಲವು ಕಾರ್ಯಕ್ರಮಗಳೊಂದಿಗೆ ಈ ಸಪ್ತಾಹ ಅಂತ್ಯಗೊಳ್ಳಲಿದೆ. ಲೈವ್ ಸಂಗೀತ ಕಾರ್ಯಕ್ರಮ, ಬೀದಿ ತಿಂಡಿ ಆಹಾರ ಮೇಳ, ಬೀದಿ ಕ್ರೀಡೆಗಳು, ಕಥೆ ಹೇಳುವುದು, ಚಲನಚಿತ್ರ ಪ್ರದರ್ಶನಗಳು, ಸಮುದಾಯಗಳ ನಡುವೆ ಬಾಂಧವ್ಯ ಬೆಸುಗೆ ಕಾರ್ಯಕ್ರಮ ಇತ್ಯಾದಿಗಳು ಇದರಲ್ಲಿ ಸೇರಿವೆ. ಇದಲ್ಲದೆ, ʻಥೀಮ್ ಫ್ರೀಡಮ್‌@ಟೆಕ್ನಾಲಜಿʼ ಯಂತಹ ಇತರ ಕಾರ್ಯಕ್ರಮಗಳನ್ನು ನಗರಗಳನ್ನು 75 ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳ (ಐಸಿಸಿಸಿಗಳು) ಮೂಲಕ ಅವಕಾಶವಿರುವ ನಗರಗಳಲ್ಲಿ ಪ್ರದರ್ಶಿಸಲಾಗುವುದು. ಈ ʻಐಸಿಸಿಸಿʼಗಳು ನಗರಗಳನ್ನು ಸಕ್ರಿಯಗೊಳಿಸುವುದರ ಜೊತೆಗೆ ನಾಗರಿಕರ ಜೀವನಕ್ಕೆ ಮುಕ್ತಿಯನ್ನು ಒದಗಿಸುತ್ತವೆ- ತ್ಯಾಜ್ಯದಿಂದ ಮುಕ್ತಿ; ಸಂಚಾರ ದಟ್ಟಣೆಯಿಂದ ಮುಕ್ತಿ; ಅಪರಾಧದಿಂದ ಮುಕ್ತಿ; ನೀರಿನ ಕೊರತೆಯಿಂದ ಮುಕ್ತಿ; ಸರತಿ ಸಾಲುಗಳಿಂದ ಮುಕ್ತಿ; ಹಸಿರುಮನೆ ಅನಿಲಗಳಿಂದ ಮುಕ್ತಿ(ಜಿಎಚ್‌ಜಿಗಳು); ಮಾಲಿನ್ಯದಿಂದ ಮುಕ್ತಿ; ರೋಗದಿಂದ ಮುಕ್ತಿ; ಮತ್ತು ಅದಕ್ಷತೆಯಿಂದ ಮುಕ್ತಿ ಇತ್ಯಾದಿ.

    ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ, ಪ್ರಧಾನಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರಿಕತೆ ಮಾಡ್ಯೂಲ್‌ (ಪಿಎಂಎಫ್‌ಎಂಇ) ಹಾಗೂ ʻಪೈಸಾ ಪೋರ್ಟಲ್ʼ ಮೂಲಕ ʻಪ್ರದೇಶ ಮಟ್ಟದ ಒಕ್ಕೂಟʼ (ಎಎಲ್‌ಎಫ್)ಗಳಿಗೆ ಆವರ್ತನ ನಿಧಿ(ಆರ್‌ಎಫ್) ಆನ್‌ಲೈನ್ ವರ್ಗಾವಣೆʼಗೆ ಚಾಲನೆ ನೀಡಲಾಗುವುದು. ʻಸ್ವಾನಿಧಿ ಸೆ ಸಮೃದ್ಧಿʼ ಶಿಬಿರಗಳನ್ನು ಆಯೋಜಿಸಲಾಗುವುದು.

    300x250 AD

    ನಗರ ಸಾರಿಗೆ ವಲಯದಲ್ಲಿ, ಈ ಕೆಳಗಿನ ಕಾರ್ಯಕ್ರಮಗಳನ್ನು ದೇಶಾದ್ಯಂತ ಸಪ್ತಾಹದ ವೇಳೆ ನಡೆಸಲು ಯೋಜಿಸಲಾಗಿದೆ:

    ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಘಟನೆಗಳನ್ನು ಫೋಟೋಗಳು ಮತ್ತು ಸಂಕ್ಷಿಪ್ತ ಮಾಹಿತಿ ಪ್ರದರ್ಶನದ ಮೂಲಕ ಬಿತ್ತರಿಸುವುದು. ಚಾಲನೆಯಲ್ಲಿರುವ ಮೆಟ್ರೊ ಜಾಲದ ಪ್ರಮುಖ ನಿಲ್ದಾಣಗಳಲ್ಲಿರುವ ಕಾರ್ಯಕ್ರಮ ಸ್ಥಳದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗುವುದು.

    ಪ್ರಮುಖ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲಾದ ಎಲ್‌ಇಡಿ ಪರದೆಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವ್‌ ಥೀಮ್‌ ಲೋಗೊ ಹಾಗೂ ಸ್ವಾತಂತ್ರ್ಯದ 75 ವರ್ಷಗಳಲ್ಲಿ ಸಾಧನೆಗಳ ಕಿರು ಪರಿಚಯದ ಪ್ರದರ್ಶನ.

    ಎಲ್‌ಇಡಿ ಪರದೆಗಳು ಲಭ್ಯವಿರುವ ರೈಲುಗಳ ಒಳಗೆ ಇದೇ ರೀತಿಯ ವಿಷಯಗಳ ಪ್ರದರ್ಶನ.

    75 ವರ್ಷಗಳ ʻಆಜಾದಿ ಕಾ ಅಮೃತ್‌ ಮಹೋತ್ಸವ್‌ʼ ಲೋಗೋದ ಸುಮಾರು ಐದು ಸೆಟ್‌ಗಳನ್ನು ಕಲಾತ್ಮಕ ರೀತಿಯಲ್ಲಿ ಅಭಿವೃದ್ಧಿಪಡಿಸುವುದು, ಅವುಗಳ ಮುಂದೆ ಜನರು ಸೆಲ್ಫಿಗಳನ್ನು ಸಹ ತೆಗೆದುಕೊಳ್ಳಬಹುದು. ಇವುಗಳನ್ನು ಮೆಟ್ರೋ ಮುಖ್ಯ ನಿಲ್ದಾಣಗಳ ಬಳಿ ಇರಿಸಲಾಗುತ್ತದೆ, ಮತ್ತು ವಿವಿಧ ನಿಲ್ದಾಣಗಳು/ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತದೆ.

    ನಿಲ್ದಾಣಗಳು ಮತ್ತು ರೈಲುಗಳ ಒಳಗೆ ಖಾಲಿ ಇರುವ ಜಾಹೀರಾತು ಫಲಕಗಳನ್ನು ವ್ಯಾಪಕ ಸಾರ್ವಜನಿಕ ಜಾಗೃತಿಗಾಗಿ ಆಜಾದಿ ಕಾ ಅಮೃತ ಮಹೋತ್ಸವ್‌ ಸಂದೇಶವನ್ನು ಪ್ರಚಾರ ಮಾಡಲು ಬಳಸಲಾಗುತ್ತದೆ.

    ಕಾಮಗಾರಿ ಸ್ಥಳಗಳು/ ಡಿಪೋಗಳಲ್ಲಿ ಸಸಿಗಳನ್ನು ನೆಡುವುದು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಆಡಿಯೋ/ ವೀಡಿಯೊ ಸಂದೇಶಗಳು, ಕಾರ್ಯಾಚರಣೆಯಲ್ಲಿರುವ ಕೇಂದ್ರಗಳ ಕಾಲಂಗಳಲ್ಲಿ ಪಾರಂಪರಿಕ ಸ್ಮಾರಕಗಳ ಪ್ರದರ್ಶನ, ವಾಹನರಹಿತ ಸಂಚಾರದ ಪ್ರಚಾರ- ಸೈಕ್ಲೋಥಾನ್ /ಮ್ಯಾರಥಾನ್, ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ.

    ಸಪ್ತಾಹದ ವೇಳೆ ‘ಹೊಸ ಕಟ್ಟಡ ಸಾಮಗ್ರಿಗಳು ಮತ್ತು ತಂತ್ರಜ್ಞಾನಗಳು’, ‘ಆಸ್ಪತ್ರೆ ನಿರ್ಮಾಣ ಮತ್ತು ಸಲಕರಣೆಗಳ ಕ್ಷೇತ್ರದಲ್ಲಿ ತಂತ್ರಜ್ಞಾನ’ ಮತ್ತು ‘ಇಆರ್‌ಪಿಯೊಂದಿಗೆ ಸಿಪಿಡಬ್ಲ್ಯೂಡಿಯ ಭವಿಷ್ಯ’ ಕುರಿತು ವೆಬಿನಾರ್‌ಗಳನ್ನು ಸಿಪಿಡಬ್ಲ್ಯೂಡಿ ಆಯೋಜಿಸಲಿದೆ. ಅಲ್ಲದೆ, 2021ರ ಅಕ್ಟೋಬರ್ 2ರಂದು ʻಸಿಪಿಡಬ್ಲ್ಯೂಡಿʼ ತಾನು ನಿರ್ವಹಣೆ ಮಾಡುವ 75 ವಸತಿ ಪ್ರದೇಶಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಮತ್ತು ಸ್ಯಾನಿಟೈಸೇಷನ್‌ ಕೈಗೊಳ್ಳಲಿದೆ. ಸಿಪಿಡಬ್ಲ್ಯೂಡಿ ನಿರ್ವಹಿಸುವ 75 ವಸತಿ ಪ್ರದೇಶಗಳಲ್ಲಿ ʻಆರ್‌ಡಬ್ಲ್ಯೂಎʼ ಸಮಾಲೋಚನೆಗಳು ನಡೆಯಲಿವೆ. ʻಸಿಪಿಡಬ್ಲ್ಯೂಡಿʼನ 75 ಯೋಜನೆಗಳ ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುವುದು.

    Share This
    300x250 AD
    300x250 AD
    300x250 AD
    Leaderboard Ad
    Back to top