ಮನುಷ್ಯ ಸಂಘಜೀವಿ. ಪರಸ್ಪರರ ಜೀವನ-ವ್ಯವಹಾರದ ಅಭಿವೃದ್ಧಿಗೆ ಸಹಕಾರಿ ಮನೋಭಾವ ಅತ್ಯಗತ್ಯ. ತಾನು ಬೆಳೆಯುವುದರ ಮೂಲಕ ಮತ್ತೊಬ್ಬರನ್ನು ಬೆಳೆಸುವುದು ಮತ್ತು ಒಟ್ಟಾಗಿ ಕೂಡಿ ಬೆಳೆಯುವುದು ಆದರ್ಶ ಪಥ. ಆ ಹಾದಿಯಲ್ಲಿ ಈ ನಡೆ.
ಕಾಲಕ್ಕನುಗುಣವಾಗಿ ವ್ಯವಹಾರದ ಶೈಲಿ, ರೀತಿಗಳು ಬದಲಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಸಂಪರ್ಕ ಸುಲಭ. ಆದರೆ ವ್ಯವಸ್ಥಿತ ರೀತಿಯಲ್ಲಿ, ನಂಬಿಕೆಗೆ ಯೋಗ್ಯ ವ್ಯವಹಾರಿಕವಾಗಿ ಅವಕಾಶ ಒದಗಿಸುವುದು ತೀರಾ ಕಷ್ಟಸಾಧ್ಯ. ಆ ಹಿನ್ನಲೆಯಲ್ಲಿ ಈ ಪ್ರಯತ್ನ..
e-ಉತ್ತರ ಕನ್ನಡ ತನ್ನ ಆಂಡ್ರಾಯ್ಡ್ ಆ್ಯಪ್, ವಾಟ್ಸಪ್ ಬ್ರಾಡ್ ಕಾಸ್ಟ್ ಹಾಗು ವೆಬ್ಸೈಟ್ ಮೂಲಕ ಓದುಗರ ನಂಬಿಕೆಗೆ ಯೋಗ್ಯ ಸುದ್ದಿಯನ್ನು ತಲುಪಿಸುತ್ತಿದ್ದು, ಪ್ರಸ್ತುತ 22,000 ಕ್ಕೂ ಅಧಿಕ ಆ್ಯಪ್ ಡೌನ್ ಲೋಡ್ ಆಗಿದ್ದು, 5,000ಕ್ಕೂ ಹೆಚ್ಚು ಜನರಿಗೆ ವೈಯಕ್ತಿಕವಾಗಿ ವಾಟ್ಸಪ್ ಬ್ರಾಡ್ ಕಾಸ್ಟ್ ಮೂಲಕ ಸುದ್ದಿ ತಲುಪುತ್ತಿದೆ.
ಕೇವಲ ಉತ್ತರ ಕನ್ನಡದಲ್ಲಿ ಮಾತ್ರವಲ್ಲದೇ ಬೆಂಗಳೂರು, ಮೈಸೂರು ಸೇರಿದಂತೆ ಮಹಾರಾಷ್ಟ್ರ, ಗೋವಾ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಕೇರಳ ಜೊತೆಗೆ ಅಮೇರಿಕಾ, ದುಬೈ-ಅರಬ್ ದೇಶ, ಜರ್ಮನಿ, ಆಸ್ಟ್ರೇಲಿಯಾ, ಇಟಲಿ ಇನ್ನಿತರ ಸ್ಥಳದಲ್ಲಿ ವಾಸಿಸುವ ಉತ್ತರ ಕನ್ನಡಿಗರನ್ನು ನಿರಂತರವಾಗಿ ನಿತ್ಯ ತಲುಪುತ್ತಿದೆ ಎಂಬ ಹೆಮ್ಮೆ e-ಉತ್ತರ ಕನ್ನಡದ್ದು.
ನಮಗೆ ಜಾಹಿರಾತು ನೀಡುವ ಮೂಲಕ ನಮ್ಮ ಸ್ವಾಸ್ಥ್ಯ ಬೆಳವಣಿಗೆಗೆ ತಾವು ಕಾರಣರಾಗುತ್ತೀರಿ ಎಂಬ ಕೃತಜ್ಞತಾ ಮನೋಭಾವ ನಮಗೆಂದಿಗೂ ಇದೆ. ಎಂದೆಂದಿಗೂ ಇರುತ್ತದೆ. ಧನ್ಯವಾದ