ಜೋಯಿಡಾ: ಕೆಟ್ಟು ನಿಂತ ಲಾರಿಯೊಂದಕ್ಕೆ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬಾಪೇಲಿ ಕ್ರಾಸ್ ಬಳಿ ನಡೆದಿದೆ.
ಚಾವಲಿ ನಿವಾಸಿ ಈಶ್ವರ ಗಜಾನನ ನಾಯ್ಕ (26) ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ತಲೆಗೆ ಗಂಭೀರ ಹೊಡೆತ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.