Slide
Slide
Slide
previous arrow
next arrow

ತವಾಂಗ್‌ನಲ್ಲಿ104 ಅಡಿ ಎತ್ತರದ ದೇಶದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜ ಹಾರಾಟ

300x250 AD

ತವಾಂಗ್: 104 ಅಡಿ ಎತ್ತರದ  ರಾಷ್ಟ್ರಧ್ವಜವನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಗುರುವಾರದಂದು 10,000 ಅಡಿ ಎತ್ತರದಲ್ಲಿರುವ ತವಾಂಗ್‌ನಲ್ಲಿರುವ ನಂಗ್‌ಪಾ ನಾಟ್ಮೆ (ಬುದ್ಧ ಪಾರ್ಕ್) ನಲ್ಲಿ ಹಾರಿಸಿದರು. ಚೀನಾದ ಗಡಿಯಲ್ಲಿರುವ ಬೌದ್ಧ ಯಾತ್ರಿಕರ ಪಟ್ಟಣ ಇದಾಗಿದೆ.

ಎತ್ತರದ ದೃಷ್ಟಿಯಿಂದ ಇದು ದೇಶದ ಎರಡನೇ ಅತಿ ಎತ್ತರದ ರಾಷ್ಟ್ರಧ್ವಜವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಜೈ ಹಿಂದ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಈ ರಾಷ್ಟ್ರೀಯ ಧ್ವಜದ ದೃಶ್ಯಗಳನ್ನು ಹಂಚಿಕೊಂಡಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು,  “ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ 10,000 ಅಡಿ ಎತ್ತರದಲ್ಲಿ 104 ಅಡಿ ಎತ್ತರದ ರಾಷ್ಟ್ರೀಯ ಧ್ವಜ” ಎಂದು ಟ್ವೀಟ್ ಮಾಡಿದ್ದಾರೆ.

300x250 AD

ಇದೇ ವೇಳೆ ರಾಷ್ಟ್ರಧ್ವಜವನ್ನು ಅರುಣಾಚಲದ ಜನತೆಗೆ ಸಮರ್ಪಿಸಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ತಿಳಿಸಿದ್ದಾರೆ.

“ಅರುಣಾಚಲದ ದೇಶಭಕ್ತರಿಗೆ 104 ಅಡಿ ರಾಷ್ಟ್ರೀಯ ಧ್ವಜವನ್ನು ಅರ್ಪಿಸಲು ಹೆಮ್ಮೆಪಡುತ್ತೇನೆ, ಇದನ್ನು ಇಂದು 10000 ಅಡಿ ಎತ್ತರದಲ್ಲಿ ತವಾಂಗ್‌ನ ನ್ಗಾಂಗ್ಪಾ ನಾಟ್ಮೆ (ಬುದ್ಧ ಪಾರ್ಕ್) ನಲ್ಲಿ ಹಾರಿಸಲಾಗಿದೆ.  ತವಾಂಗ್ ನಗರದ ಮೇಲಿರುವ ಈ ಸ್ಮಾರಕ ರಾಷ್ಟ್ರೀಯ ಧ್ವಜವು ದೇಶದ ಎರಡನೇ ಅತಿ ಎತ್ತರದಲ್ಲಿದೆ” ಎಂದು ಖಂಡು ಗುರುವಾರ ಟ್ವೀಟ್ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top