Slide
Slide
Slide
previous arrow
next arrow

ಶ್ರೀನಗರ ಪೊಲೀಸರ ಎನ್‌ಕೌಂಟರ್‌’ಗೆ ಹತರಾದ ಇಬ್ಬರು ಉಗ್ರರು

300x250 AD

ನವದೆಹಲಿ: ಶ್ರೀನಗರದ ಜಕುರಾ ಪ್ರದೇಶದಲ್ಲಿ ಶ್ರೀನಗರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಗೆ ಸೇರಿದ ಕನಿಷ್ಠ 2 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕಾಶ್ಮೀರ ವಲಯ ಪೊಲೀಸರ ಪ್ರಕಾರ, ಇತ್ತೀಚೆಗೆ ಹಾಸನ್‌ಪೋರಾ ಅನಂತನಾಗ್‌ನಲ್ಲಿ ಹೆಚ್‌ಸಿ ಅಲಿ ಮೊಹದ್ ಹತ್ಯೆಯಲ್ಲಿ ಭಾಗಿಯಾಗಿದ್ದ ಇಖ್ಲಾಕ್ ಹಜಾಮ್ ಇಂದು ಎನ್‌ಕೌಂಟರ್‌ನಲ್ಲಿ ಹತರಾದ ಭಯೋತ್ಪಾದಕರಲ್ಲಿ ಒಬ್ಬ.

ಉಗ್ರರ ಬಳಿ 2 ಪಿಸ್ತೂಲ್ ಸೇರಿದಂತೆ ಅಕ್ರಮ ಸಾಮಗ್ರಿಗಳು ಪತ್ತೆಯಾಗಿವೆ.

300x250 AD

“ಎಲ್‌ಇಟಿ/ಟಿಆರ್‌ಎಫ್‌ನ ಭಯೋತ್ಪಾದಕರನ್ನು ಶ್ರೀನಗರ ಪೊಲೀಸರು ತಟಸ್ಥಗೊಳಿಸಿದ್ದಾರೆ. ಇತ್ತೀಚೆಗೆ ಹಸನ್‌ಪೋರಾ ಅನಂತನಾಗ್‌ನಲ್ಲಿ ನಡೆದ ಹೆಚ್‌ಸಿ ಅಲಿ ಮೊಹದ್ ಅವರ ಹತ್ಯೆಯಲ್ಲಿ ಭಾಗಿಯಾದ ಭಯೋತ್ಪಾದಕರಲ್ಲಿ ಒಬ್ಬನಾದ ಇಖ್ಲಾಕ್ ಹಜಾಮ್ ಬಲಿಯಾದವರಲ್ಲಿ ಒಬ್ಬ. 2 ಪಿಸ್ತೂಲ್‌ಗಳು ಸೇರಿದಂತೆ ಅಪಾಯಕಾರಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಐಜಿಪಿ ಕಾಶ್ಮೀರ ಟ್ವಿಟ್‌ ಮಾಡಿದ್ದಾರೆ.

ಈ ಎನ್‌ಕೌಂಟರ್ ಶನಿವಾರ ಮುಂಜಾನೆ ಶ್ರೀನಗರ ನಗರದ ಜಕುರಾ ಪ್ರದೇಶದಲ್ಲಿ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

Share This
300x250 AD
300x250 AD
300x250 AD
Back to top