ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಪಶು ಆಸ್ಪತ್ರೆ ಧಾರವಾಡದ ಆವರಣದಲ್ಲಿ ರೈತ/ರೈತ ಮಹಿಳೆಯರಿಗಾಗಿ ಮೂರು ದಿನಗಳ ಹೈನುಗಾರಿಕೆ ಮತ್ತು ಕುರಿ ಹಾಗೂ ಮೇಕೆ ಸಾಕಾಣಿಕೆ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಿದೆ.

ಪರೀಕ್ಷಕರ ತರಬೇತಿ ಕೇಂದ್ರ ಮತ್ತು ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಧಾರವಾಡ ಇವರ ವತಿಯಿಂದ ತರಬೇತಿ ನಡೆಯಲಿದ್ದು, ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ಎಸ್.ಎಮ್.ಎಸ್ ಸಂದೇಶದ ಮೂಲಕ ಅಥವಾ ಕಚೇರಿಯ ದೂರವಾಣಿ ಕರೆ ಮುಖಾಂತರ ಇಲ್ಲವೇ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ : 9448227626, 9591024499 ಅಥವಾ ಕಚೇರಿ ದೂರವಾಣಿ ಸಂಖ್ಯೆ0836-2443743 ಸಂಪರ್ಕಿಸುವಂತೆ ಕೋರಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.