Slide
Slide
Slide
previous arrow
next arrow

ಸರ್ವಾನುಮತದ ಠರಾವಿಗೆ ಕಾರ್ಯಾಧ್ಯಕ್ಷರ ಮೇಲೆ ಮಾತ್ರ ಕೇಸ್ ದಾಖಲು !

300x250 AD

ಇದೇನಾ ಸಹಕಾರಿ ಸಾಕ್ಷರತೆ ಎಂದ ಸದಸ್ಯ ಜನತೆ ! ದ್ವೇಷ ರಾಜಕೀಯಕ್ಕೆ ಸದಸ್ಯರು ಪುಲ್ ಗರಂ

ಗೋಪಿಕೃಷ್ಣ🖋

ಶಿರಸಿ: ರಾಜ್ಯದ ಸಹಕಾರಿ ರಂಗದಲ್ಲಿ ಉತ್ತರ ಕನ್ನಡ ಸಹಕಾರಿ ಕ್ಷೇತ್ರ ಬಹಳ ಎತ್ತರದ ಸ್ಥಾನದಲ್ಲಿತ್ತು. ಆದರೆ ಇತ್ತಿಚಿನ ಕೆಲವು ವರ್ಷದಲ್ಲಿನ ಆಗು-ಹೋಗುಗಳನ್ನು ಗಮನಿಸಿದರೆ ಸಹಕಾರಿ ಕ್ಷೇತ್ರದಲ್ಲಿಯೂ ಸಹ ಅಧಿಕಾರದ ದಾಹ, ಸ್ವಾರ್ಥದ ಕಾರಣಕ್ಕೆ ಬಣ ರಾಜಕೀಯ, ದ್ವೇಷ ಭಾವನೆ ಹೆಚ್ಚತೊಡಗಿದೆ. ಇದಕ್ಕೆ ಅನುರೂಪವೆಂಬಂತೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಸಂಸ್ಥೆಯಾಗಿರುವ ಟಿಎಸ್ಎಸ್ ಇತ್ತಿಚಿನ ದಿನದಲ್ಲಿ ಇಡುತ್ತಿರುವ ಹೆಜ್ಜೆಗಳು ದ್ವೇಷ, ಬಣ ರಾಜಕೀಯದಿಂದ ಸದಸ್ಯರ ಆಕ್ರೋಷಕ್ಕೆ ಕಾರಣವಾಗಿದೆ.

ಕಳೆದ 2023, ಆಗಸ್ಟ್ ನಲ್ಲಿ ನಡೆದ ಟಿಎಸ್ಎಸ್ ಚುನಾವಣೆಯಲ್ಲಿ ಹಳೆಯ ಕಮಿಟಿಯ ಬದಲಾಗಿ ಸದಸ್ಯರು ಕಡವೆ ಕುಟುಂಬದ ಓರ್ವರನ್ನು ಹೊರತುಪಡಿಸಿ ಉಳಿದ ಎಲ್ಲ ಸ್ಥಾನಗಳಿಗೆ ಹೊಸಬರನ್ನು ಆಯ್ಕೆಮಾಡಿತ್ತು. ಹೊಸದಾಗಿ ಆಯ್ಕೆಯಾದ ನಿರ್ದೇಶಕ ಮಂಡಳಿಯು ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಲಕ್ಷ್ಯ ನೀಡದೇ, ಹಳಬರ ತಪ್ಪು ಹುಡುಕುವುದನ್ನೇ ಉದ್ಯೋಗವನ್ನಾಗಿಸಿಕೊಂಡಿತ್ತು. ಹಳಬರು ತಪ್ಪು ಮಾಡಿದ್ದರೆ ಅದನ್ನು ಹುಡುಕಿ ಸದಸ್ಯರಿಗೆ ತೋರಿಸುವುದು ತಪ್ಪಲ್ಲ. ಆದರೆ ಅದೇ ತಮ್ಮ ಆಡಳಿತದ ಉದ್ಧೇಶವಾಗಬಾರದು. ಜೊತೆಗೆ ನೂತನ ಅಧ್ಯಕ್ಷರ ಸರ್ವಾಧಿಕಾರದ ಪರಿಣಾಮವಾಗಿ ಸಂಘವು ಅಭಿವೃದ್ದಿಯಲ್ಲಿ ಇಳಿಮುಖವಾಗತೊಡಗಿತು. ಇದರ ನೇರ ಪರಿಣಾಮವಾಗಿದ್ದು ಅಡಿಕೆ ಬೆಳೆಗಾರರ ಮೇಲೆ. ಕಳೆದ ಸಾಲಿಗಿಂತ ಈ ಬಾರಿಯ ಅಡಿಕೆ ಬೆಲೆಯಲ್ಲಿ ತೀವ್ರ ಇಳಿಕೆ ಕಂಡಿದ್ದು, ಅಡಿಕೆ ಮಾರುಕಟ್ಟೆಯಲ್ಲಿ ಸಂಘದ ಹಿಡಿತ, ಸಂಸ್ಥೆ ನಡೆಸುವವರ ಅನುಭವವನ್ನು ಪ್ರಶ್ನಿಸುವಂತೆ ಮಾಡಿದೆ.

ದ್ವೇಷ ರಾಜಕೀಯಕ್ಕೆ ಸಹಕಾರಿ ಕ್ಷೇತ್ರದ ದುರ್ಬಳಕೆ:

ಹೊಸ ಆಡಳಿತ ಮಂಡಳಿಯಿಂದ ಹಳೆಯ ಅಡಳಿತ ಮಂಡಳಿಯ ಕಾರ್ಯ ಚಟುವಟಿಕೆಗೆ ಸಂಬಂಧಿಸಿ ಕಳೆದ ಐದು ವರ್ಷದ ವ್ಯವಹಾರಗಳನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸುವಂತೆ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಒಪ್ಪಿಗೆ ಪಡೆದಿದ್ದರು. ಇದಕ್ಕೆ ಸಂಬಂಧಿಸಿ ಸಂಘದ ಮಾಜಿ ಜಿ.ಎಂ. ರವೀಶ ಹೆಗಡೆ ಸಂಸ್ಥೆಗೆ ಹಾಜರಾದ ವರ್ಷದಿಂದಲೂ ಸಹ ಲೆಕ್ಕ ಪರಿಶೋಧನೆಗೆ ಒಳಪಡಿಸುವಂತೆ ಸಭೆಯಲ್ಲಿ ಕೆಲ ಸದಸ್ಯರಿಂದ ವಿಷಯ ಪ್ರಸ್ತಾಪವಾಗಿದ್ದರೂ ಸಹ ನೂತನ ಅಧ್ಯಕ್ಷರು ಇದಕ್ಕೆ ಮನಸ್ಸು ಮಾಡಲಿಲ್ಲ. ಬದಲಾಗಿ ಸದ್ಯಕ್ಕೆ ಕಳದೈದು ವರ್ಷಗಳಿಗೆ ಮಾತ್ರ ಆಂತರಿಕ ಲೆಕ್ಕ ಪರಿಶೋಧನೆ ಮಾಡಿಸುವುದಾಗಿ ಘೋಷಣೆ ಮಾಡಿದ್ದರು. ಕಳೆದ  ಅಕ್ಟೋಬರ್ ನಿಂದ ಬಹುತೇಕ 7-8 ತಿಂಗಳಿ‌ನಿಂದ ಲೆಕ್ಕ ಪರಿಶೋಧನೆ ನಡೆಯುತ್ತಲೇ ಇತ್ತು. ಇನ್ನೂ ಒಂದೆರಡು ತಿಂಗಳು ಬೇಕಾಗಬಹುದು ಎಂದು ವರದಿಯನ್ನು ಮುಂದೂಡುತ್ತಲೇ ಇದ್ದರು.‌ಆದರೆ ಇದೀಗ ಯಾವ ಕಾರಣಕ್ಕೋ ಗೊತ್ತಿಲ್ಲ. ತಮ್ಮ ಲೆಕ್ಕ ಪರಿಶೋಧನೆಯ ಮಧ್ಯಂತರ ವರದಿ ಪ್ರಕಾರ ಸಂಸ್ಥೆಯ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ಟ, ಇದೀಗ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹಾಗು ಮಾಜಿ ಪ್ರಧಾನ ವ್ಯವಸ್ಥಾಪಕರನ್ನು ಮಾತ್ರ ಗುರಿಯನ್ನಾಗಿಸಿಕೊಂಡು ಸಿವಿಲ್ ವಿಷಯಕ್ಕೆ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿರುವುದು ದ್ವೇಷ ರಾಜಕೀಯವನ್ನು ತೋರಿಸುತ್ತದೆ ಎಂಬುದು ಸಂಸ್ಥೆಯ ಬಹುತೇಕ ಸದಸ್ಯರ ಮಾತಾಗಿದೆ.

ಬಾಕ್ಸ್: 

ಸಾಮಾಜಿಕ ಜಾಲತಾಣದಲ್ಲಿ ಠರಾವು ಪ್ರತಿ ಹಂಚಿಕೆ: ಸದಸ್ಯ ರೈತರ ಆಕ್ರೋಷ: 

300x250 AD

ಇತ್ತಿಚೆಗೆ ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ಟ,  ಹಿಂದಿನ ಆಡಳಿತ ಮಂಡಳಿಯ ಒಂದು ಜಮೀನು ಖರೀದಿ ಸಂಬಂಧಿಸಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಅದಕ್ಕೆ ಸಂಬಂಧಿಸಿ ಮಾಜಿ ಜನರಲ್ ಮ್ಯಾನೇಜರ್ ಹಾಗು ಮಾಜಿ ಕಾರ್ಯಾಧ್ಯಕ್ಷರ ಮೇಲೆ ಮಾತ್ರ ದೂರು ದಾಖಲಿಸಿದ್ದು, ಸದಸ್ಯ ರೈತರ ಬೇಸರ, ಆಕ್ರೋಷಕ್ಕೆ ಕಾರಣವಾಗಿದೆ. ಸದರಿ ಜಮೀನು ಖರೀದಿಗೆ ಸಂಬಂಧಿಸಿ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ಠರಾವು ಪಾಸ್ ಆಗಿತ್ತು.‌ಆಂದತೆ ಸದರಿ ವ್ಯವಹಾರಕ್ಕೆ ಸಂಬಂಧಿಸಿ ಎಲ್ಲ ನಿರ್ದೇಶಕರು ಜಂಟಿ ಹಾಗು ವಯಕ್ತಿಕವಾಗಿ ಜವಾಬ್ದಾರರು. ಆದರೆ ಪ್ರಸ್ತುತ ಅದಕ್ಕೆ ಸಂಬಂಧಿಸಿ ಕಾರ್ಯಾಧ್ಯಕ್ಷರನ್ನು ಮಾತ್ರ ಗುರಿಯನ್ನಾಗಿಸಿ ಕೇಸ್ ದಾಖಲಿಸಿದ್ದು, ದ್ವೇಷ ರಾಜಕೀಯಕ್ಕೆ ಹಿಡಿದ ಕೈಗನ್ನಡಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯ. ಕೇಸ್ ಮಾಡುವುದಾದರೆ ಒಪ್ಪಿಗೆ ನೀಡಿದ ಎಲ್ಲ ನಿರ್ದೇಶಕರ ಮೇಲೆಯೂ ಕೇಸ್ ಮಾಡಬೇಕಿತ್ತು. ಆದರೆ ಇಲ್ಲಿ ಕಡವೆ ಕುಟುಂಬಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ಟಿಎಸ್ಎಸ್ ಸಂಸ್ಥೆಯ ಸದಸ್ಯ ರೈತರೇ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

ಖೋಟ್:

ಕಡವೆ ರಾಮಕೃಷ್ಣ ಹೆಗಡೆ ಹೆಸರನ್ನು ಕೆಡಿಸಿದರೆ ಮಾತ್ರ, ಮುಂದಿನ ಚುನಾವಣೆಯಲ್ಲಿ ತಮಗೆ ಅನುಕೂಲವಾದೀತು ಎಂಬುದು ಈಗಿನ ಅಧ್ಯಕ್ಷರ ವಿಚಾರದಂತಿದೆ. ಹಾಗಾಗಿ ಅವರನ್ನು ಗುರಿಯನ್ನಾಗಿಸಿ ಕೇಸ್ ದಾಖಲಿಸಲಾಗುತ್ತಿದೆ. ಕಡವೆಯವರು ಪರಿಶುದ್ಧರು, ಪ್ರಾಮಾಣಿಕರು. ಇಂತಹ ಕುಟೀಲ-ದುಷ್ಟ  ನೀತಿಯಿಂದ ಜನಮಾನಸದಲ್ಲಿರುವ ಕಡವೆ ಅಭಿಮಾನ, ಪ್ರೀತಿ ಕಡಿಮೆಯಾಗದು. ರಾಮಕೃಷ್ಣ ಹೆಗಡೆ ಕಡವೆಯವರಿಗೆ ತೊಂದರೆಕೊಟ್ಟಷ್ಟು ಸದಸ್ಯರು ಅವರ ಪರ ನಿಲ್ಲುವುದು ಶತಸಿದ್ಧ

– ಸುಬ್ರಾಯ ಹೆಗಡೆ, ಕಿಬ್ಬಳ್ಳಿ

ಹಳೆಯ ಆಡಳಿತ ಮಂಡಳಿಯಲ್ಲಿ ಕಾರ್ಯಾಧ್ಯಕ್ಷರನ್ನು ಮಾತ್ರ ಗುರಿ ಮಾಡಿ, ಕೇಸ್ ದಾಖಲಿಸಲಾಗಿದೆ. ಹಾಲಿ ಅಧ್ಯಕ್ಷರಿಗೆ ಬದ್ಧತೆ, ನೈತಿಕತೆಯಿದ್ದರೆ ತಮ್ಮ ಪ್ರಭಾರಿ ವ್ಯವಸ್ಥಾಪಕನಿಗೆ ಹೇಳಿ ಹಳೆಯ ಎಲ್ಲ ನಿರ್ದೇಶಕರ ಮೇಲೆ ಕೇಸ್ ದಾಖಲಿಸಲಿ. ಆಗ ಕೇಸಿನ ನೈಜ ಬಣ್ಣಹೊರಬರಲಿದೆ. ಸಹಕಾರಿ ಸಾಕ್ಷರತೆ ಪುಸ್ತಕ ಬರೆದವರಿಗೇ ಸಹಕಾರಿ ರಂಗದ ಸಾಕ್ಷರತೆಯ ಪಾಠವನ್ನು ಸದಸ್ಯರು ಮಾಡುವ ಅನಿವಾರ್ಯತೆ ಇದ್ದಂಗೆ ಕಾಣುತ್ತದೆ.

– ಎಂ.ಜಿ. ಭಟ್ಟ, ಹೆಗ್ಗರಣಿ

(ಮುಂದುವರೆಯುವುದು)

Share This
300x250 AD
300x250 AD
300x250 AD
Back to top