Slide
Slide
Slide
previous arrow
next arrow

ಮೇ.11,12ಕ್ಕೆ ನಾಡಗುಳಿಯವರ ಚಿತ್ರಕಲಾ ಪ್ರದರ್ಶನ

300x250 AD

ಶಿರಸಿ: ಪ್ರಪ್ರಥಮ ಬಾರಿಗೆ ಖ್ಯಾತ ಚಿತ್ರ ಕಲಾವಿದೆ, ಗಾಯಕಿ, ರಾಜ್ಯ ಕರಕುಶಲ ಪ್ರಶಸ್ತಿ ಪುರಸ್ಕೃತೆ ರೇಖಾ ಸತೀಶ ಭಟ್ಟ ನಾಡಗುಳಿಯವರ ಕೈಯಲ್ಲಿ ಅರಳಿದ ಚಿತ್ರಕಲಾ ಪ್ರದರ್ಶನವನ್ನು ಮೇ.11 ಹಾಗೂ 12 ರಂದು ಹೊಟೆಲ್ ಸುಪ್ರಿಯಾ ಇಂಟರ್ ನ್ಯಾಶನಲ್‌ನ ಸಂಭ್ರಮ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ರೋಟರಿ ಮತ್ತು ಇನ್ನರ್ ವೀಲ್ ಕ್ಲಬ್ ಶಿರಸಿ, ಆದರ್ಶ ವನಿತಾ ಸಮಾಜ ಶಿರಸಿ ಹಾಗೂ ಶಿರಸಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಸಹಯೋಗದಲ್ಲಿ ಮೇ.11 ಶನಿವಾರ ಇಳಿಹೊತ್ತು 4.30 ರಿಂದ ಆರಂಭಗೊಳ್ಳಲಿದೆ.

ಎರಡು ದಿನ ನಡೆಯುವ ಚಿತ್ರಕಲಾ ಪ್ರದರ್ಶನವನ್ನು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹಾಗೂ ಅಂಕಣಕಾರ ಹರಿಪ್ರಕಾಶ ಕೋಣೆಮನೆ ಉದ್ಘಾಟಿಸಲಿದ್ದಾರೆ.‌ ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಚಿತ್ರ ಕಲಾವಿದ ನಿರ್ನಳ್ಳಿ ಗಣಪತಿ ಮತ್ತು ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೌಶಿಕ ಹೆಗಡೆಯವರಿಗೆ ಸನ್ಮಾನ ನೆರವೇರಿಸಲಾಗುತ್ತಿದ್ದು, ಸನ್ಮಾನವನ್ನು ಹಾಗೂ ಅಭಿನಂದನಾ ನುಡಿಯನ್ನು ವಿದ್ಯಾವಾಚಸ್ಪತಿ ಹಾಗೂ ನಿವೃತ್ತ ಪ್ರಾಂಶುಪಾಲ ವಿ.ಉಮಾಕಾಂತ ಭಟ್ಟ ಕೇರೆಕೈ ನಡೆಸಿಕೊಡಲಿದ್ದಾರೆ.
    ರೇಖಾ ಸತೀಶ ಭಟ್ಟ ನಾಡಗುಳಿ ಬಾಲ್ಯದಿಂದಲೇ ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದು, ಬಿಎ ಪದವಿಧರೆ ಮತ್ತು ಸಮಾಜದ ಹತ್ತಾರು ಮಹಿಳಾ ಸಂಘಟನೆಯ ಸದಸ್ಯೆ ಕೂಡ ಆಗಿದ್ದಾಳೆ. ಚಿತ್ರಕಲೆಯೊಂದಿಗೆ ಕರಕುಶಲಗಳ ಕುರಿತು ಅತಿಯಾದ ಆಸಕ್ತಿ ಹೊಂದಿ ಕರಕುಶಲ ಮಹಿಳೆಯಾಗಿ ರಂಗೋಲಿ, ಮೆಹಂದಿ, ಸಾರಿ ಡಿಸೈನ್ ಮಾಡುವಲ್ಲಿ ನಿಪುಣ ಮಹಿಳೆಯಾಗಿ ಗುರುತಿಸ್ಪಟ್ಟಿರುವುದು ಉಲ್ಲೇಖನೀಯ.
   ಗಾಯಕಿ ಕೂಡ ಆಗಿರುವ ರೇಖಾ, ಅನೇಕ ಕಾರ್ಯಕ್ರಮಗಳ ನಿರೂಪಕಿಯಾಗಿ, ರಾಜ್ಯ ಮಟ್ಟದಲ್ಲಿ ನಡೆಯುವ ವಿವಿಧ ಸ್ಪರ್ಧೆಗಳ ನಿರ್ಣಾಯಕಿಯಾಗಿ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದಾರೆ. ಪರಿಸರ ಪ್ರಿಯಳಾಗಿ, ಕೈತೋಟ, ಗಾರ್ಡನ್ ನಿರ್ವಹಣೆ ಹೀಗೆ ಹತ್ತಾರು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇವರ ಕೈಯಿಂದ ಅರಳಿದ ಚಿತ್ರಕಲೆ, ಪೇಂಟಿಂಗ್ ಗಳು ಅಮೆರಿಕಾದಂತಹ ಬೇರೆ ಬೇರೆ ದೇಶಗಳಿಗೆ ಹೋಗಿದ್ದು ಶಿರಸಿ ನಗರದ ಜನತೆಗೆ ಅದನ್ನು ನೋಡುವ ಅಂಗವಾಗಿ ಪ್ರದರ್ಶನ ಏರ್ಪಡಿಸಲಾಗಿದೆ.
    ಮೇ.12,ರವಿವಾರ ಪ್ರದರ್ಶನ ಮುಂದುವರೆಯಲಿದ್ದು, ಅಂದು ಪ್ರದರ್ಶನದಂಗವಾಗಿ ಸಂಜೆ 6 ಗಂಟೆಯಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆರಂಭಿಕವಾಗಿ ರಾಷ್ಟ್ರ ತಬಲಾ ಖ್ಯಾತಿಯ ಗೋವಾದ ಡಾ.ಉದಯ ಕುಲಕರ್ಣಿ ಇವರಿಂದ ತಬಾಲ ಸೋಲೊ ನಡೆಯಲಿದೆ. ಈ ಸಂದರ್ಭದಲ್ಲಿ ಲೆಹರಾದಲ್ಲಿ ದತ್ತರಾಜ ಮಹಲ್ಶಿ ಸಹಕರಿಸಲಿದ್ದಾರೆ. ನಂತರದಲ್ಲಿ ನಡೆಯುವ ಭಕ್ತಿ ಭಾವ ಸಂಗೀತದಲ್ಲಿ ವಿದೂಷಿ ರೇಖಾ ದಿನೇಶ ಪಾಲ್ಗೊಳ್ಳಲಿದ್ದು, ತಬಲಾದಲ್ಲಿ ಡಾ.ಉದಯ ಕುಲಕರ್ಣಿ, ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ ಸಹಕರಿಸಲಿದ್ದಾರೆ.
    2022-23ನೆಯ ಸಾಲಿನ ರಾಜ್ಯ ಸರ್ಕಾರದ ಕರಕುಶಲ ನಿಗಮ ಮಂಡಳಿಯ ಕರಕುಶಲ ಮಹಿಳೆ ಪ್ರಶಸ್ತಿಗೂ ಭಾಜನರಾದ ರೇಖಾ ಭಟ್ಟ ಚಿತ್ರಕಲಾ ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top