Slide
Slide
Slide
previous arrow
next arrow

ಬಸ್ ಪಾಸ್ ನವೀಕರಣಕ್ಕೆ ಫೆ.28ರವರೆಗೆ ಅವಧಿ ವಿಸ್ತರಣೆ

300x250 AD

ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಈಗಾಗಲೇ ವಿತರಿಸಿರುವ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳ ಅವಧಿಯು ಡಿ.31 ಮುಕ್ತಾಯವಾಗಲಿದ್ದು, ವಿಕಲಚೇತನರ ಫಲಾನುಭವಿಗಳು ಸೇವಾಸಿಂಧು ಆನ್‌ಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ, ಪಾಸುಗಳನ್ನು ನವೀಕರಿಸಿಕೊಳ್ಳಲು ಫೆ.28ರವರೆಗೆ ವಿಸ್ತರಿಸಲಾಗಿದೆ.
ಹಾಗೆಯೇ 2023ನೇ ಸಾಲಿನ ವಿಕಲಚೇತನರ ಹೊಸ ರಿಯಾಯಿತಿ ಬಸ್ ಪಾಸ್‌ಗಳನ್ನು ಸಂಸ್ಥೆಯಿoದ ಪಡೆಯಲು ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನ ಮೂಲಕ ಜ.02ರಿಂದ ಪಡೆಯಬಹುದಾಗಿದೆ. ನಾಗರಿಕರು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top