Slide
Slide
Slide
previous arrow
next arrow

ಬಾಲಮಂದಿರ ಪ್ರೌಢಶಾಲೆಯಲ್ಲಿ ‘ವ್ಯಸನ ಮುಕ್ತ ದಿನಾಚರಣೆ’

ಕಾರವಾರ: ನಗರದ ಬಾಲಮಂದಿರ ಪ್ರೌಢಶಾಲೆಯಲ್ಲಿ ‘ವ್ಯಸನ ಮುಕ್ತ’ ದಿನವನ್ನು ಆಚರಿಸಲಾಯಿತು. ಆರಂಭದಲ್ಲಿ ಮಾದಕ ದ್ರವ್ಯಗಳನ್ನು ಯಾರೂ ಸೇವಿಸಬಾರದು ಎಂದು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿಯನ್ನು ಮಾಡಿಸಲಾಯಿತು. ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಮಾತನಾಡಿ, ಇಂದು ಅನೇಕ ಜನರು ಮಾದಕ ವ್ಯಸನಕ್ಕೆ…

Read More

ವಲಯ ಮಟ್ಟದ ಶೈಕ್ಷಣಿಕ ಕ್ರೀಡಾಕೂಟ:ಸ್ನೇಹಸಾಗರ ಶಾಲೆಯ ಉತ್ಕೃಷ್ಟ ಸಾಧನೆ

ಯಲ್ಲಾಪುರ:ತಾಲೂಕಿನ ಇಡಗುಂದಿಯ ಸ್ನೇಹಸಾಗರ ಶಾಲೆಯು ಪ್ರಸಕ್ತ ಸಾಲಿನ ವಲಯ ಮಟ್ಟದ ಶೈಕ್ಷಣಿಕ ಕ್ರೀಡಾಕೂಟದಲ್ಲಿ ಉತ್ಕೃಷ್ಟ ಸಾಧನೆಯನ್ನು ಮಾಡುವುದರ ಮೂಲಕ ಸಮಗ್ರ ವೀರಾಗ್ರಣಿ ಸ್ಥಾನವನ್ನು ಪಡೆದುಕೊಂಡಿದೆ.ಶೈಕ್ಷಣಿಕ ವರ್ಷದ ಇಡಗುಂದಿ ವಲಯದ 7 ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ತಾಲೂಕಿನ ಮಲವಳ್ಳಿಯಲ್ಲಿ ಜರುಗಿದ್ದು…

Read More

ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಜಪ್ತಿ

ಜೊಯಿಡಾ: ತಾಲೂಕಿನ ಅನಮೋಡ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಬುಧವಾರ ಬೆಳಗಿನ ಜಾವ 1.30ಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ವಾಹನ ಸಮೇತ ಅಬಕಾರಿ ಅಧಿಕಾರಿಗಳು ಜಪ್ತಿಪಡಿಸಿಕೊಂಡಿದ್ದಾರೆ. ಆರೋಪಿ, ತಾಲೂಕಿನ ಕ್ಯಾಸಲ್‌ರಾಕ್ ಮೂಲದ ವಿಲಾಸ್ ಗೌಳಿ…

Read More

ಪಕ್ಷಿಧಾಮದಲ್ಲಿ ಹಿಂದಿನ ದಾಖಲೆ ಮುರಿದ ಜುಲೈ ತಿಂಗಳ ಮಳೆ

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮದಲ್ಲಿರುವ ಮುಂಡಿಗೆ ಕೆರೆ ಪಕ್ಷಿಧಾಮದಲ್ಲಿ ಜುಲೈ ತಿಂಗಳ 1 ರಿಂದ 31ರವರೆಗೆ ಬಿದ್ದ ಒಟ್ಟೂ ಮಳೆ 1057.2 ಮಿ ಮೀ ಆಗಿರುತ್ತದೆ. ಸೋಂದಾ ಜಾಗೃತ ವೇದಿಕೆಯು 2015 ರಿಂದ ಈ ಪಕ್ಷಿ…

Read More

ದೇಶದ ಉನ್ನತ ಹುದ್ದೆಗಳು ಉತ್ತರದವರ ಪಾಲು:ಮಾರ್ಗರೇಟ್ ಆಳ್ವ

ಶಿರಸಿ: ‘ಎನ್.ಡಿ.ಎ. ಅಧಿಕಾರಾವಧಿಯಲ್ಲಿ ದೇಶದ ಉನ್ನತ ಹುದ್ದೆಗಳನ್ನು ಉತ್ತರ ಭಾರತದವರಿಗೆ ನೀಡಲಾಗಿದೆ. ದಕ್ಷಿಣ ಭಾರತದವರಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡಲು ಮತ ಯಾಚಿಸಿದ್ದೇನೆ’ ಎಂದು ಯು.ಪಿ.ಎ. ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ಹೇಳಿದರು. ಇಲ್ಲಿನ ಪತ್ರಕರ್ತರೊಂದಿಗೆ ಮಂಗಳವಾರ ಆನ್…

Read More

ರಸ್ತೆ ದುರಸ್ತಿಗೊಳಿಸಲು ಕಲರವ ಸಂಸ್ಥೆಯಿಂದ ಆಗ್ರಹ:ತಪ್ಪಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ಶಿರಸಿ: ಭೈರುಂಬೆಯ ಕಲರವ ಸೇವಾ ಸಂಸ್ಥೆಯು ಸಾಮಾಜಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಕಳೆದ ಕೆಲ ತಿಂಗಳ ಹಿಂದೆ ಶಿರಸಿ-ಯಲ್ಲಾಪುರ ಮುಖ್ಯ ಹೆದ್ದಾರಿಯಲ್ಲಿ ಗಡಿಗೆಹೊಳೆ ಕ್ರಾಸ್‌ನಿಂದ ಭೈರುಂಬೆಗೆ ತೆರಳುವ…

Read More

ಕೋಗಿಲಬನದಲ್ಲಿ ಹಿಂದೂ ರುದ್ರಭೂಮಿ ಕಟ್ಟಡ ಲೋಕಾರ್ಪಣೆ

ದಾಂಡೇಲಿ: ನಗರದ ಕೋಗಿಲಬನದಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಸಹಕಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತವಾದ ಹಿಂದೂ ರುದ್ರಭೂಮಿ ಕಟ್ಟಡದ ವಿದ್ಯುಕ್ತ ಲೋಕಾರ್ಪಣೆಯು ಜರುಗಿತು.ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯು ದಾನಿಗಳ ನೆರವಿನೊಂದಿಗೆ ಹಿಂದೂ ರುದ್ರಭೂಮಿ…

Read More

ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ

ಸಿದ್ದಾಪುರ: ಕಲ್ಕತ್ತಾದ ನೇತಾಜಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಆರನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ರಾಠೋಡ ಕರಾಟೆ ತರಬೇತಿ ಕೆಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ನಾಲ್ಕು ಪದಕಗಳನ್ನು ಗೆದ್ದು ಸಾಧನೆಗೈದಿದ್ದಾರೆ.ಸುಮಾರು 10 ದೇಶಗಳಿಂದ 4800ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ…

Read More

ಕಲ್ಪನಾ ಶೆಟ್ಟಿ ನಿವೃತ್ತಿ : ಸನ್ಮಾನ ಬೀಳ್ಕೊಡುಗೆ

ಕಾರವಾರ: ದಿನಗೂಲಿ ನೌಕರರಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತನಲ್ಲಿ ವೃತ್ತಿ ಪ್ರಾರಂಭಿಸಿ ನಂತರ ಪ್ರಥಮ ದರ್ಜೆ ಸಹಾಯಕರಾಗಿ ಕಳೆದ 38 ವರ್ಷ ಅತ್ಯಂತ ಪ್ರಾಮಾಣಿಕತೆಯಿಂದ ಸುದೀರ್ಘ ಸೇವೆ ಸಲ್ಲಿಸಿ ವಯೋಸಹಜ ನಿವೃತ್ತಿ ಹೊಂದಿದ ಕಲ್ಪನಾ ಶೆಟ್ಟಿ ಅವರಿಗೆ ಜಿಲ್ಲಾ…

Read More

ಚವಡಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಮಂಜುನಾಥ ಕಟಗಿ ಅವಿರೋಧ ಆಯ್ಕೆ

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಂಜುನಾಥ ಕಟಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಚವಡಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ನೇತ್ರಾವತಿ ಬಿಸಣ್ಣನವರ ರಾಜೀನಾಮೆ ನೀಡಿದ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಕಟಗಿ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿರಸಿ…

Read More
Back to top