Slide
Slide
Slide
previous arrow
next arrow

ಮಕರಸಂಕ್ರಮಣದ ಪರ್ವಕಾಲದಲ್ಲಿ ಕನಕನಹಳ್ಳಿಯಲ್ಲಿ ಯಕ್ಷಗಾನ

300x250 AD

ಅಂಕೋಲಾ: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಾರವಾರ ಮತ್ತು ವಿಜಯ ವಿನಾಯಕ ಯುವಕ ಸಂಘ ಕನಕನಹಳ್ಳಿ ಇವರ ಸಹಯೋಗದಲ್ಲಿ ‘ವೀರಮಣಿ ಕಾಳಗ’ ಎಂಬ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ಕನಕನಹಳ್ಳಿಯಲ್ಲಿ ಮಂಗಳವಾರ ನಡೆಯಿತು.

ಈ ಕಾರ್ಯಕ್ರಮದ ಸಭಾಧ್ಯಕ್ಷರಾದ ಸಾಮಾಜಿಕ ಕಾರ್ಯಕರ್ತ ಗಣಪತಿ ಭಟ್ಟ ಮಾತನಾಡಿ ಸದ್ಯದ ಸ್ಥಿತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ತೀರಾ ಸಂಕುಚಿತ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ, ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಸ್ತರಾಗಿರುತ್ತಾರೆ, ಪರಸ್ಪರ ಕೂಡುವಿಕೆ ನಿಧಾನವಾಗಿ ಕಡಿಮೆಯಾಗುತ್ತಿದೆ ಸಮೂಹದ ಜತೆಗೂಡಿ ಕಾರ್ಯಕ್ರಮಗಳ ವೀಕ್ಷಣೆ ಇನ್ನೂ ಹೆಚ್ಚಿನ ಪರಿಣಾಮವನ್ನು ನೀಡುತ್ತದೆ. ಪ್ರೇಕ್ಷಕರ ಉತ್ಸಾಹವೇ ಕಲಾವಿದನ ಬಹುಮಾನವಾಗಿರುತ್ತದೆ ಎಂದರು.

300x250 AD

ಮುಖ್ಯ ಅತಿಥಿ ಗಜಾನನ ಹರಿಮನೆ ಸರ್ಕಾರದ ಯೋಜನೆಯನ್ನು ಮೂಲೆ ಮೂಲೆಯ ಹಳ್ಳಿಗೂ ತಲುಪಿಸುವ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಮಂಜುನಾಥ ಭಾಗ್ವತ, ರಾಘವೇಂದ್ರ ಗಾಂವ್ಕರ್, ವೆಂಕಟ್ರಮಣ ಭಟ್ಟ ಉಪಸ್ಥಿತರಿದ್ದರು. ವೇದಿಕೆಯ ಗಣ್ಯರನ್ನು ಪ್ರತೀಕ ಗಾಂವ್ಕರ್ ಸ್ವಾಗತಿಸಿದರು, ಗಣೇಶ್ ನಾಯ್ಕ ವಂದಿಸಿದರು. ತದನಂತರ ಶ್ರೀ ಲಕ್ಷ್ಮೀನರಸಿಂಹ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದವರ ಸಂಯೋಜನೆಯಲ್ಲಿ ವೀರಮಣಿ ಕಾಳಗ ಎಂಬ ಪೌರಾಣಿಕ ಯಕ್ಷಗಾನ ನಡೆಯಿತು.

Share This
300x250 AD
300x250 AD
300x250 AD
Back to top