• Slide
    Slide
    Slide
    previous arrow
    next arrow
  • ವಲಯ ಮಟ್ಟದ ಶೈಕ್ಷಣಿಕ ಕ್ರೀಡಾಕೂಟ:ಸ್ನೇಹಸಾಗರ ಶಾಲೆಯ ಉತ್ಕೃಷ್ಟ ಸಾಧನೆ

    300x250 AD

    ಯಲ್ಲಾಪುರ:ತಾಲೂಕಿನ ಇಡಗುಂದಿಯ ಸ್ನೇಹಸಾಗರ ಶಾಲೆಯು ಪ್ರಸಕ್ತ ಸಾಲಿನ ವಲಯ ಮಟ್ಟದ ಶೈಕ್ಷಣಿಕ ಕ್ರೀಡಾಕೂಟದಲ್ಲಿ ಉತ್ಕೃಷ್ಟ ಸಾಧನೆಯನ್ನು ಮಾಡುವುದರ ಮೂಲಕ ಸಮಗ್ರ ವೀರಾಗ್ರಣಿ ಸ್ಥಾನವನ್ನು ಪಡೆದುಕೊಂಡಿದೆ.
    ಶೈಕ್ಷಣಿಕ ವರ್ಷದ ಇಡಗುಂದಿ ವಲಯದ 7 ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ತಾಲೂಕಿನ ಮಲವಳ್ಳಿಯಲ್ಲಿ ಜರುಗಿದ್ದು ಅಥ್ಲೇಟಿಕ್ ಮತ್ತುಇತರೆ ವಿಭಾಗದ ಕ್ರೀಡೆಗಳಲ್ಲಿ ಸುಮಾರು 30 ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
    ವಿದ್ಯಾರ್ಥಿಗಳು ಸಾಮೂಹಿಕ ವಿಭಾಗಗಳಾದ ಬಾಲಕರ ಥ್ರೋ ಬಾಲ್, ಕೋಕೋ, ರೀಲೆ, ಯೋಗಸ್ಪರ್ಧೆಗಳಲ್ಲಿ ಹಾಗೂ ಅಥ್ಲೇಟಿಕ್ ವಿಭಾಗಗಳಾದ ವಾಕ್, ಹರ್ಡಲ್ಸ್, ತ್ರಿಬಲ್ ಜಂಪ್, ನೂರು ಮೀಟರ್ ನಿಂದ ಮೂರುಸಾವಿರ ಮೀಟರ್‌ ರೀಲೆ, ಹ್ಯಾಮರ್ ಎಸೆತದಂತಹ ಎಲ್ಲಾ ಕ್ರೀಡಾ ಚಟುವಟಟಿಕೆಗಳಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ , ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
    ವಿದ್ಯಾರ್ಥಿ ನಿಕಿಲ್‌ ಆಯ್ದ ವಿಭಾಗಗಳಲ್ಲಿ ಭಾಗವಹಿಸಿ 154 ಅಂಕಗಳನ್ನು ಪಡೆದು ಸಮಗ್ರ ವೀರಾಗ್ರಣೀಯನ್ನು ಪಡೆದುಕೊಂಡು ಶಾಲೆಯ ಗೌರವಕ್ಕೆ ಪಾತ್ರರಾಗಿದ್ದಾರೆ. ವಲಯ ಮಟ್ಟದ ಕ್ರೀಡಾಕೂಟದಲ್ಲಿಉತ್ಕೃಷ್ಟ ಸಾಧನೆಯನ್ನು ಮಾಡಿದ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ ಹಾಗೂ ಮುಖ್ಯಾಧ್ಯಾಪಕರು, ಶಿಕ್ಷಕೇತರವರ್ಗ, ವಿದ್ಯಾರ್ಥಿ ಸಮೂಹ ಶುಭಕೋರಿ ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top