Slide
Slide
Slide
previous arrow
next arrow

ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ

300x250 AD

ಸಿದ್ದಾಪುರ: ಕಲ್ಕತ್ತಾದ ನೇತಾಜಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಆರನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ರಾಠೋಡ ಕರಾಟೆ ತರಬೇತಿ ಕೆಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ನಾಲ್ಕು ಪದಕಗಳನ್ನು ಗೆದ್ದು ಸಾಧನೆಗೈದಿದ್ದಾರೆ.
ಸುಮಾರು 10 ದೇಶಗಳಿಂದ 4800ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ಕರಾಟೆ ತರಬೇತಿ ಕೇಂದ್ರದ ಆನಂದ ಕೆ.ನಾಯ್ಕ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ವಿದ್ಯಾರ್ಥಿಗಳಾದ ಅಜಿತ್ ಕೊಡಿಯ ಬೆಳ್ಳಿ ಹಾಗೂ ಕಂಚಿನ ಪದಕ ಮತ್ತು ಜಯಂತ ಎಮ್.ನಾಯ್ಕ ಕಂಚಿನ ಪದಕವನ್ನು ಪಡೆದರು. ಇವರ ಸಾಧನೆಗೆ ತಾಲೂಕಿನ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top