Slide
Slide
Slide
previous arrow
next arrow

ಕಲ್ಪನಾ ಶೆಟ್ಟಿ ನಿವೃತ್ತಿ : ಸನ್ಮಾನ ಬೀಳ್ಕೊಡುಗೆ

300x250 AD

ಕಾರವಾರ: ದಿನಗೂಲಿ ನೌಕರರಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತನಲ್ಲಿ ವೃತ್ತಿ ಪ್ರಾರಂಭಿಸಿ ನಂತರ ಪ್ರಥಮ ದರ್ಜೆ ಸಹಾಯಕರಾಗಿ ಕಳೆದ 38 ವರ್ಷ ಅತ್ಯಂತ ಪ್ರಾಮಾಣಿಕತೆಯಿಂದ ಸುದೀರ್ಘ ಸೇವೆ ಸಲ್ಲಿಸಿ ವಯೋಸಹಜ ನಿವೃತ್ತಿ ಹೊಂದಿದ ಕಲ್ಪನಾ ಶೆಟ್ಟಿ ಅವರಿಗೆ ಜಿಲ್ಲಾ ಪಂಚಾಯತ್‌ನ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳೆಲ್ಲರೂ ಆತ್ಮೀಯವಾಗಿ ಸನ್ಮಾನಿಸಿ ಸಂತೋಷದಿಂದ ಬೀಳ್ಕೊಟ್ಟರು.
ನಗರದ ಜಿ.ಪಂ ಸಭಾಂಗಣದಲ್ಲಿ ಶನಿವಾರ ನಡೆದ ಕಲ್ಪನಾ ಶೆಟ್ಟಿ ಅವರ ಬಿಳ್ಕೋಡುಗೆ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಮಾತನಾಡಿ, ಪ್ರಥಮ ದರ್ಜೆ ಸಹಾಯಕರಾಗಿ ಜಿಲ್ಲಾ ಪಂಚಾಯತನ ಸಮಿತಿ ವಿಭಾಗದಲ್ಲಿ ಕೆಲಸ ನಿರ್ವಹಿಸಿದ ಕಲ್ಪನಾ ಶೆಟ್ಟಿ ಅತ್ಯಂತ ಸರಳ ಜೀವನ ನಡೆಸಿದವರು. ಜಿ.ಪಂ ನ ಸಮಾನ್ಯ ಸಭೆ, ಪೂರಕವಾದ ಅನುಪಾಲನಾ ವರದಿ, ಸಾರ್ವಜನಿಕರ ಕುಂದು ಕೊರತೆಯಂತಹ ಹಲವು ಕ್ಲೀಷ್ಟಕರವಾದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಆಡಳಿತ ವರದಿಯಂತಹ ಕೈಪಿಡಿಯನ್ನು ತಯಾರಿಸುವಲ್ಲಿ ಇವರ ಸೇವೆ ಅತಿ ಅಮೂಲ್ಯವಾಗಿದೆ. ನಿವೃತ್ತಿಯ ದಿನದವರೆಗೂ ಕಳಿಕಳಿಯಿಂದ ಕಚೇರಿ ಕೆಲಸವನ್ನು ಎಂದಿನಂತೆ ಸೇವಾ ಮನೋಭಾದಿಂದ ನಿರ್ವಹಿಸಿದ ವೃತ್ತಿ ಗೌರವ ಇವರದ್ದಾಗಿದೆ ಕಲ್ಪನಾ ಶೆಟ್ಟಿ ಅವರ ಕಾರ್ಯ ವೈಖರಿ ಹಾಗೂ ಕೆಲಸ ನಿರ್ವಹಣೆಯಲ್ಲಿ ತೋರುತ್ತಿದ್ದ ಜವಾಬ್ದಾರಿ, ಕಾಳಜಿಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಆಡಳಿತ ವಿಭಾಗದ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಮಾತನಾಡಿ, ಕಲ್ಪನಾ ಶೆಟ್ಟಿ ಅವರು ಜಿ.ಪಂ.ನ ಆಡಳಿತ ವಿಭಾಗದಲ್ಲಿ ಮಾಹಿತಿ ಹಕ್ಕು, ಕಚೇರಿ ಸಾಮಗ್ರಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಇವರ ಕಾರ್ಯನಿರ್ವಹಿಸಿದ ಪರಿ ಹಾಗೂ ಜವಾಬ್ದಾರಿಯುತ ಸೇವೆಯು ಯುವ ಸಿಬ್ಬಂದಿಗೆ ಮಾದರಿಯಾಗಿದ್ದು, ಕಲ್ಪನಾ ಶೆಟ್ಟಿ ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಆಶಿಸಿದರು.
ಲೆಕ್ಕಾಧಿಕಾರಿ ಆನಂದ್ಸಾ ಹಬೀಬ್ ಮಾತನಾಡಿ, ಲೆಕ್ಕ ಪತ್ರ ಶಾಖೆಯಲ್ಲಿ 10 ವರ್ಷಗಳ ಕಾಲ ಅತ್ಯಂತ ಸೂಕ್ತ ಹಾಗೂ ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದರು. ಪ್ರಾಜೆಕ್ಟ್ ಎಂಜಿನಿಯರ್ ಕೃಷ್ಣ ಶಾಸ್ತ್ರೀ, ಎಸ್‌ಬಿಎಂ ಕಾರ್ಯಕ್ರಮ ಸಮಾಲೋಚಕ ಸೂರ್ಯನಾರಾಯಣ ಭಟ್ ಸಹ ಅವರ ಸರಳತೆ ಹಾಗೂ ವೃತ್ತಿಯಲ್ಲಿನ ನಿಷ್ಠೆಯ ಕುರಿತು ಪ್ರಶಂಸಿದರು. ಈ ವೇಳೆ ಜಿಲ್ಲಾ ಪಂಚಾಯತನ ಎಲ್ಲಾ ಅಧಿಕಾರಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top