• Slide
    Slide
    Slide
    previous arrow
    next arrow
  • ಚವಡಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಮಂಜುನಾಥ ಕಟಗಿ ಅವಿರೋಧ ಆಯ್ಕೆ

    300x250 AD

    ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಂಜುನಾಥ ಕಟಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಚವಡಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ನೇತ್ರಾವತಿ ಬಿಸಣ್ಣನವರ ರಾಜೀನಾಮೆ ನೀಡಿದ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಕಟಗಿ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿರಸಿ ಉಪವಿಭಾಗಧಿಕಾರಿ ದೇವರಾಜ್ ಅವರ ಬಳಿಗೆ ಈ ಹಿಂದೆ ಅಧ್ಯಕ್ಷೆ ನೇತ್ರಾವತಿ ಬಿಸಣ್ಣನವರ ಅವರ ವಿರುದ್ಧವಾಗಿ ಒಂಬತ್ತು ಜನರು ಸೇರಿ ಅವಿಶ್ವಾಸಕ್ಕೆ ಮನವಿ ಸಲ್ಲಿಸಿದ್ದರು.
    ಅವಿರೋಧವಾಗಿ ಆಯ್ಕೆಯಾದ ಮಂಜುನಾಥ ಕಟಗಿ ಅವರು ನಾಲ್ಕನೆ ಬಾರಿ ಗ್ರಾಮ ಪಂಚಾಯತ ಸದಸ್ಯರಾಗಿ, ಒಂದು ಬಾರಿ ಉಪಾಧ್ಯಕ್ಷರಾಗಿದ್ದ ಇವರು, ಇದೀಗ ಅವಿರೋಧವಾಗಿ ಅಧ್ಯಕ್ಷರಾಗಿದ್ದಾರೆ.
    ಈ ಸಂದರ್ಭದಲ್ಲಿ ವಾಕರಸಾ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್, ಬಿಜೆಪಿ ತಾಲೂಕಾ ಅಧ್ಯಕ್ಷ ನಾಗಭೂಷಣ ಹಾವಣಗಿ, ಪರಶುರಾಮ ತಹಶೀಲ್ದಾರ, ಗುಡ್ಡಪ್ಪ ಕಾತೂರ, ವಾಯ್.ಪಿ ಭುಜಂಗಿ, ಪ್ರದೀಪ ಚವ್ಹಾಣ, ಉಮೇಶ ಬಿಜಾಪುರ, ಶಿಗ್ನಳ್ಳಿ,ವಾಯ್.ಪಿ ಪಾಟೀಲ ಹಾಗೂ ನಾಗರಾಜ ಗುಬ್ಬಕ್ಕನವರ ಇನ್ನೂ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top