Slide
Slide
Slide
previous arrow
next arrow

ದೇಶಪಾಂಡೆ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

300x250 AD

ಹಳಿಯಾಳ: ವಿ. ಆರ್. ಡಿ. ಎಂ. ಟ್ರಸ್ಟ್ , ಲಯನ್ಸ ಕ್ಲಬ್, ಮಹಾವಿದ್ಯಾಲಯದ ಎನ್. ಎಸ್. ಎಸ್. ಹಾಗು ಯುವ ರೆಡ್ ಕ್ರಾಸ್ ಘಟಕಗಳ ಜಂಟಿ ಆಶ್ರಯದಲ್ಲಿ ಪಟ್ಟಣದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರಕ್ಕೆ ಹುಬ್ಬಳಿಯ ನವನಗರದ ಪದ್ಮಶ್ರೀ ಡಾ. ಆರ್. ಬಿ. ಪಾಟೀಲ ಕ್ಯಾನ್ಸರ ಆಸ್ಪತ್ರೆಯ ವೈದ್ಯರಾದ ಡಾ. ಉಮೇಶ ಹಳ್ಳಿಕೇರಿ ಚಾಲನೆ ನೀಡಿದರು.


ಅವರು ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡುವ ಮೂಲಕ ಆರೋಗ್ಯದ ಕಾಳಜಿ ವಹಿಸುವ ಕಾರ್ಯ ಪ್ರಶಂಸನೀಯ ಹಾಗು ಇತರರಿಗೆ ಉತ್ತೇಜನ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

300x250 AD


ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ವಿ. ಎ. ಕುಲಕರ್ಣಿ, ಆಡಳಿತ ವಿಭಾಗ ಮುಖ್ಯಸ್ಥ ಮಂಜುನಾಥ, ಡಿ. ವಿ. ಚೌಗುಲಾ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯ ವಿನಾಯಕ ಚವ್ಹಾಣ, ಲಾಯನ್ಸ ಕ್ಲಬ್ ಅಧ್ಯಕ್ಷ ಬಸವರಾಜ ಬೆಂಢಿಗಿರಿಮಠ, ಪದಾಧಿಕಾರಿ ಮಹಾಂತೇಶ ಹಿರೇಮಠ, ಅರೋಗ್ಯ ಇಲಾಖೆಯ ಸಹಾಯಕ ಮಾರುತಿ ಅರಳಿಕಟ್ಟಿ ಇದ್ದರು.

Share This
300x250 AD
300x250 AD
300x250 AD
Back to top