ಕಾರವಾರ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಒಟ್ಟೂ ಶೇ.73.52ರಷ್ಟು ಮತದಾನ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಶಿರಸಿಯಲ್ಲಿ ಶೇ.76, ಯಲ್ಲಾಪುರ ಶೇ.79,ಭಟ್ಕಳ ಶೇ.73, ಕುಮಟಾ ಶೇ. 70.1, ಕಾರವಾರ ಶೇ.70.61, ಹಳಿಯಾಳ ಶೇ.72.35, ಕಿತ್ತೂರು ಶೇ.75.25, ಖಾನಾಪುರ ಶೇ.71.87 ರಷ್ಟು ಮತದಾನವಾಗಿದೆ.