ಕುಮಟಾ: ಹಳದಿಪುರದಿಂದ ಕುಮಟಾ ಬರುವಾಗ ಮಹಿಳೆಯೊಬ್ಬರು ಮಂಗಲ ಸೂತ್ರ ಕಳೆದುಕೊಂಡಿದ್ದು, ಆಟೋ ಚಾಲಕ ಅದನ್ನು ಮಹಿಳೆಗೆ ಒಪ್ಪಿಸಿದ್ದಾರೆ.
ಮಹಿಳೆಯು ಕುಮಟಾಕ್ಕೆ ಬರುವ ಸಂದರ್ಭದಲ್ಲಿ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದು, ಅದು ದೊರೆತ ಆಟೋ ಚಾಲಕ ಮಂಜುನಾಥ ಪಟಗಾರ ಅವರಿಗೆ ದೊರೆತಿದ್ದು, ಅವರು ಅದನ್ನು ಕುಮಟಾ ಪೆÇೀಲಿಸ್ ಸಿಬ್ಬಂದಿಯವರ ಸಮ್ಮುಖದಲ್ಲಿ ಮಹಿಳೆಗೆ ಹಸ್ತಾಂತರಿಸಿದರು. ಆಟೋ ಚಾಲಕನ ಮಾನವೀಯತೆ-ಪ್ರಾಮಾಣಿಕತೆಗೆ ಎಲ್ಲರೂ ಕೃತಜ್ಞತೆ ತಿಳಿಸಿದ್ದಾರೆ.