Slide
Slide
Slide
previous arrow
next arrow

ನಿಂಬಾಳ್ಕರ್ ಪರ ಭೀಮಣ್ಣ ನಾಯ್ಕ್ ಅಬ್ಬರದ ಪ್ರಚಾರ

300x250 AD

ಸಿದ್ದಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತಾಲೂಕಾ ಬ್ಲಾಕ್ ಕಾಂಗ್ರೆಸ್ ಜತೆ ತಾಲೂಕಿನ ಹಲವೆಡೆ ಅಬ್ಬರದ ಪ್ರಚಾರ ನಡೆಸಿದರು.

ತಾಲೂಕಿನ ನಿಲ್ಕುಂದ, ತಂಡಾಗುಂಡಿ, ಹೆಗ್ಗರಣಿ, ಅಣಲೆಬೈಲ್, ಹಸರಗೋಡ, ಕಾನಸೂರು, ತ್ಯಾಗಲಿ, ಕಾನಗೋಡ ಹಾಗೂ ಶಿರಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆ, ಐದು ಗ್ಯಾರೆಂಟಿಯಿಂದ ಬಡವರು ಹಾಗೂ ಜನಸಾಮಾನ್ಯರಿಗೆ ಆಗಿರುವ ಅನುಕೂಲದ ಕುರಿತು ಮಾಹಿತಿ ನೀಡಿ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರಿಗೆ ಪ್ರಚಂಡ ಬಹುಮತ ನೀಡುವಂತೆ ಮತ ಯಾಚಿಸಿದರು.

300x250 AD

ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಜಿ.ನಾಗರಾಜ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ, ಪ್ರಮುಖರಾದ ಆರ್.ಎಂ.ಹೆಗಡೆ, ಸಿ.ಆರ್.ನಾಯ್ಕ ಮತ್ತಿತರರು ಹಾಜರಿದ್ದರು.

Share This
300x250 AD
300x250 AD
300x250 AD
Back to top