Slide
Slide
Slide
previous arrow
next arrow

ಗೋಕರ್ಣದ ರಾಮತೀರ್ಥ ಬತ್ತಿ ಹೋಗಿರುವುದಕ್ಕೆ ಬೋರ್‍ವೆಲ್ ಕಾರಣ !

300x250 AD

ಗೋಕರ್ಣ: ಐತಿಹಾಸಿಕ ಹಿನ್ನೆಲೆಯುಳ್ಳ ರಾಮತೀರ್ಥದ ನೀರು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಇದರಿಂದ ಪ್ರವಾಸಿಗರ ಮನಸ್ಸಿಗೆ ನೋವುಂಟಾಗಿದೆ. ಆದರೆ ಈ ನೀರು ಬತ್ತಿ ಹೋಗಲು ಮೂಲ ಕಾರಣ ಬರದಿಂದಲ್ಲ. ಬದಲಾಗಿ ಅಕ್ರಮವಾಗಿ ಮೇಲ್ಭಾಗದಲ್ಲಿ ರೆಸಾರ್ಟ್‍ನವರು ಎರಡು ಬೋರ್‍ವೆಲ್ ಹೊಡೆದಿದ್ದರಿಂದಾಗಿ ರಾಮತೀರ್ಥದ ಝರಿಯು ನಿಂತು ಹೋಗಲು ಕಾರಣ ಎಂಬ ಆರೋಪ ಕೇಳಿಬರುತ್ತಿದೆ.
ಗೋಕರ್ಣದಲ್ಲಿ ಸಾಕಷ್ಟು ರೆಸಾರ್ಟ್‍ಗಳಿದ್ದು, ಅದರಲ್ಲಿ ಕೆಲವು ಅನಧಿಕೃತ ರೆಸಾರ್ಟ್‍ಗಳ ಸಂಖ್ಯೆಯೂ ಹೆಚ್ಚಿದೆ. ಹಾಗೇ ಕೆಲವರು ಅನಧಿಕೃತವಾಗಿ ತಮಗೆ ಮನಸ್ಸಿಗೆ ಬಂದ ಕಡೆಗಳಲ್ಲಿ ಬೊರ್‍ವೆಲ್ ಕೊರೆಸಿದ್ದರಿಂದಾಗಿ ಸಾಕಷ್ಟು ಕಡೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಹರಿವು ನಿಂತು ಹೋಗಿದೆ. ಅವುಗಳಲ್ಲಿ ರಾಮತೀರ್ಥವು ಕೂಡ ಒಂದು ಎನ್ನಲಾಗಿದೆ.
ಧಾರ್ಮಿಕವಾಗಿ ಸಾಕಷ್ಟು ಇತಿಹಾಸವಿರುವ ರಾಮತೀರ್ಥಕ್ಕೆ ಅಡ್ಡಿ ಉಂಟುಮಾಡುವ ಬೊರ್‍ವೆಲ್‍ಗಳನ್ನು ಕೊರೆಸಿದರೂ ಕೂಡ ಈ ಬಗ್ಗೆ ಯಾರೂ ಗಮನ ಹರಿಸದೇ ಇರುವುದು ನಿಜಕ್ಕೂ ಆತಂಕಕಾರಿ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಕ್ಕೂ ಕೂಡ ಕುಂದುಂಟಾಗಲಿದೆ. ಈ ಬಗ್ಗೆ ದೇವಸ್ಥಾನಕ್ಕೆ ಸಂಬಂಧಪಟ್ಟವರು ಚಿಂತಿಸಬೇಕಾದ ಅಗತ್ಯವಿದೆ.

300x250 AD
Share This
300x250 AD
300x250 AD
300x250 AD
Back to top