• Slide
    Slide
    Slide
    previous arrow
    next arrow
  • ಸೈನಿಕ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ

    300x250 AD

    ಮುಂಡಗೋಡ : ತಾಲೂಕಿನ ಕೊಳಗಿ ಗ್ರಾಮದಲ್ಲಿ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರವತಿಯಿಂದ ಮೆಕ್ಕೆಜೋಳದಲ್ಲಿ ಫಾಲ್ ಸೈನಿಕ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆ ನಡೆಯಿತು.

    ತರಬೇತಿಯಲ್ಲಿ ಕೇಂದ್ರದ ಕೀಟ ವಿಜ್ಞಾನಿ ಡಾ. ರೂಪಾ ಎಸ್. ಪಾಟೀಲ್, ರೈತರಿಗೆ ಮೆಕ್ಕೆಜೋಳದಲ್ಲಿ ಫಾಲ್ ಸೈನಿಕ ಹುಳುವಿನ ಬಾಧೆ ಹಾಗೂ ಸಮಗ್ರ ನಿರ್ವಹಣಾ ಪದ್ಧತಿಯಲ್ಲಿ ಮೋಹಕ ಬಲೆಗಳ ಅಳವಡಿಕೆ, ಜೈವಿಕ ಕೀಟ ನಾಶಕವಾದ ಮೆಟರೈಜಿಯಂ ರಿಲೈ ಉಪಯೋಗ, ಬಳಸುವ ವಿಧಾನ ಹಾಗೂ ಶಿಫಾರಿತ ಕೀಟನಾಶಕಗಳ ಬಳಕೆ ಮಾಡಲು ಸಲಹೆ ನೀಡಿದರು. ಅಲ್ಲದೇ, ಎಕರೆಗೆ 10ರಂತೆ ಮೋಹಕ ಬಲೆಗಳ ಅಲವಡಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

    300x250 AD

    ಮತ್ತೋರ್ವ ಬೇಸಾಯ ವಿಜ್ಞಾನಿ ಡಾ.ಶಿವಶಂಕರಮೂರ್ತಿ ಅವರು ಪ್ರಸಕ್ತ ಸಂದರ್ಭದಲ್ಲಿ ಹೆಚ್ಚಿನ ಮಳೆ ಪರಿಸ್ಥಿತಿಯಲ್ಲಿ ಬೆಳವಣಿಗೆ ಕುಂಠಿತವಾಗಿ ಮೆಕ್ಕೆಜೋಳದ ಎಲೆಗಳು ಹಳದಿಯಾಗುವ ಸಮಸ್ಯೆ ನಿರ್ವಹಣೆಗಾಗಿ19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 10ಗ್ರಾಂ ನಂತೆ ಬೆರೆಸಿ ಸಿಂಪಡಿಸಲು ಸಲಹೆ ನೀಡಿದರು. ಚೌಗು ಪ್ರದೇಶದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು. ಭತ್ತ, ಅಡಿಕೆ, ಶುಂಠಿ ಹಾಗೂ ಬಾಳೆಯಲ್ಲಿ ಪೋಷಕಾಂಶ ಹಾಗೂ ರೋಗಗಳ ಹತೋಟಿಗೆ ಮಾಹಿತಿಯನ್ನು ನೀಡಿದರು. ಹಿರಿಯ ವಿಜ್ಞಾನಿ ಡಾ. ಮಂಜು ಎಂ. ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೆರೆದ ರೈತರಿಗೆ ರೈತ ಉತ್ಪಾದಕ ಕಂಪನಿಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಈರಪ್ಪ ಕಡೇರ್, ಶಿವಪ್ಪ ಕಣ್ಣೀರ ಹಾಗು ರೈತರು ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top