Slide
Slide
Slide
previous arrow
next arrow

SSLC ಮರು ಮೌಲ್ಯಮಾಪನ: ವಾನಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಮರು ಮೌಲ್ಯಮಾಪನದ ನಂತರ ಹೆಚ್ಚಳವಾಗಿದ್ದು ಪರೀಕ್ಷೆಗೆ ಕುಳಿತ 21 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಗುಣಾತ್ಮಕ ಫಲಿತಾಂಶ “ಏ” ಗ್ರೇಡ್ ಆಗಿದೆ. ಸುಶಾಂತ ಕೃಷ್ಣಮೂರ್ತಿ ಹೆಗಡೆ ಮೆಣಸೀಮನೆ 615/625, 98.40% ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ, ಸ್ವಾತಿ ಗಣಪತಿ ಭಟ್ಟ ಕಗ್ಗುಂಡಿ 598/625, 95.68% ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ, ಆದರ್ಶ ರವೀಂದ್ರ ವೈದ್ಯ ಕಕ್ಕಳ್ಳಿ 596/625, 95.36% ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು 07 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದು ಕನ್ನಡ-02 ಇಂಗ್ಲಿಷ್-01 ಸಂಸ್ಕೃತ-04 ರಲ್ಲಿ ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿರುತ್ತಾರೆ. ದಾಖಲೆಯ ಫಲಿತಾಂಶ ನೀಡಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top