ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಶುಕ್ರವಾರದಂದು ‘ಪೋಷಣ ಮಾಸಾಚರಣೆ’ ಪ್ರಯುಕ್ತ 4ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ “ಆರೋಗ್ಯಕರ ಆಹಾರ ಗಿ/s ಜಂಕ್ ಫುಡ್” ವಿಷಯದ ಕುರಿತು ವಿಚಾರಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ|ಪ್ರವೀಣ ಜೇಕಬ್, ನಿಸರ್ಗಮನೆ, ಶಿರಸಿ ಇವರು ಮಕ್ಕಳಿಗೆ ಆರೋಗ್ಯಕರ ಮತ್ತು ಅನಾರೋಗ್ಯಕರ ಆಹಾರಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ತಮ್ಮ ಸಾಕ್ಷö್ಯಚಿತ್ರಗಳ ಮೂಲಕ ತಿಳಿಸಿಕೊಟ್ಟರು. ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ವಿದ್ಯಾ ಭಟ್, ವನಸ್ತ್ರೀ ಮಾತೃ ಮಂಡಳಿ, ಶಿರಸಿ ಇವರು ಸಂಗ್ರಹಿಸಿದ 350ಕ್ಕೂ ಹೆಚ್ಚು ಧಾನ್ಯಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದರು.
ಶನಿವಾರದಂದು 8ರಿಂದ 10ನೇ ವಿದ್ಯಾರ್ಥಿಗಳಿಗೆ ‘ಕುಕಿಂಗ್ ವಿದೌಟ್ ಫೈಯರ್’ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳು ಹಾಗೂ ನಿರ್ಣಾಯಕ ಶಿಕ್ಷಕರು ವಿವಿಧ ಫ್ರೂಟ್ ಮತ್ತು ವೆಜಿಟೇಬಲ್ ಸಲಾಡ್‌ಗಳನ್ನು ಸವಿದು ಸಂತಸಪಟ್ಟರು. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಶ್ರೀನಿಕೇತನ ಶಾಲೆಯ ಪ್ರಾಂಶುಪಾಲ ವಸಂತ ಭಟ್ ಹಾಗೂ ಉಪಪ್ರಾಂಶುಪಾಲರಾದ ವಸುಧಾ ಹೆಗಡೆ ಉಪಸ್ಥಿತರಿದ್ದು, ಮಕ್ಕಳಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವ ಬಗ್ಗೆ ಜಾಗೃತಿಯನ್ನು ಮೂಡಿಸಿದರು.