• Slide
  Slide
  Slide
  previous arrow
  next arrow
 • ‘ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ’ ಎಂದು ಪ್ರಕಟಣೆ ನೀಡಿದ ಮಾಜಿ ಶಾಸಕ ವಿ.ಎಸ್.ಪಾಟೀಲ್

  300x250 AD

  ಮುಂಡಗೋಡು: ನನ್ನ ಹೆಸರನ್ನು ಹೇಳಿ ಸಾರ್ವಜನಿಕರಿಗೆ ಸುಳ್ಳು ಭರವಸೆ ಕೊಟ್ಟು ನನ್ನ ಮಗ ಬಾಪೂಗೌಡ ಪಾಟೀಲ್ ಸಾಲ ತೆಗೆದುಕೊಳ್ಳುತ್ತಿದ್ದಾನೆ. ಈತನಿಗೆ ಯಾರೂ ಸಾಲ ಕೊಡಬೇಡಿ ಎಂದು ಮಾಜಿ ಶಾಸಕ, NWKSRTC ಅಧ್ಯಕ್ಷ ವಿ.ಎಸ್.ಪಾಟೀಲ್ ಪ್ರಕಟಣೆ ನೀಡುವ ಮೂಲಕ ಮನವಿ ಮಾಡಿದ್ದಾರೆ.

  ಈ ಕುರಿತು ತಮ್ಮ ಲೆಟರ್ ಹೆಡ್ ಲಿ ಪ್ರಕಟಣೆ ನೀಡಿರುವ ಅವರು, ನನ್ನ ಮಗ ದುಶ್ಚಟಕ್ಕೆ ಬಲಿಯಾಗಿ ತನ್ನ ಎಲ್ಲ ಆಸ್ತಿಯನ್ನೂ ಹಾಳು ಮಾಡಿಕೊಂಡಿದ್ದಾನೆ. ಅವನ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಮುಂಗಡ ಚೆಕ್ ಕೊಟ್ಟು ಸಾಲ ತೆಗೆದುಕೊಳ್ಳುತ್ತಿದ್ದಾನೆ.  ದಯವಿಟ್ಟು ಯಾರೂ ನನ್ನ ಮಗನಿಗೆ ಸಾಲ ಕೊಡಬೇಡಿ ಎಂದು ಮಾಜಿ ಶಾಸಕ ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಿದ್ದಾರೆ.

  300x250 AD

  ಪದವೀಧರನಾದ ನನ್ನ ಮಗ, ಐದಾರು ವರ್ಷಗಳಿಂದ ದುಶ್ಚಟಕ್ಕೆ ಬಿದ್ದಿದ್ದಾನೆ. ಕೋಟಿಗಟ್ಟಲೇ ಸಾಲ ಮಾಡಿ, ಸಾಲ ತೀರಿಸಲು ಅವನ ಹೆಸರಿನಲ್ಲಿದ್ದ ಆಸ್ತಿಯನ್ನೂ ಮಾರಿದ್ದಾನೆ. ಅವನ ಮಾನಸಿಕ ಸ್ಥಿತಿ ಸರಿ ಇಲ್ಲ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಜನರಿಗೆ ಸುಳ್ಳು ಹೇಳಿ ಸಾಲ ಪಡೆಯುತ್ತಿದ್ದಾನೆ. ದಯವಿಟ್ಟು ಸಾರ್ವಜನಿಕರು ನನ್ನ ಮಗನ ಮಾತಿಗೆ ಮರುಳಾಗಿ ಸಾಲ ಕೊಡಬಾರದು. ಮೋಸ ಹೋಗಬಾರದು ಎಂದು ವಿನಂತಿಸಿಕೊಂಡಿರುವ ಮಾಜಿ ಶಾಸಕರು ಮಾಧ್ಯಮಗಳಿಗೆ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top