ಸಿದ್ದಾಪುರ: ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದಲ್ಲಿ ಗಣೇಶ ಹೇರೂರು ಮತ್ತು ಕುಟುಂಬದವರು ನಡೆಸಿಕೊಂಡು ಬರುತ್ತಿರುವ 67ನೇ ವರ್ಷದ ದೇವತಾರಾಧನೆ, ಯಕ್ಷಗಾನ ತಾಳಮದ್ದಳೆ ಹಾಗೂ ಸನ್ಮಾನ ಸೆ.6ರಂದು ನಡೆಯಲಿದೆ.
ಬೆಳಗ್ಗೆ ದೇವಾಲಯದಲ್ಲಿ ದೇವತಾರಾಧನೆ ಮತ್ತು ಮಧ್ಯಾಹ್ನ 1ಕ್ಕೆ ಮಿತ್ರಭೋಜನ ನಂತರ ಮಧ್ಯಾಹ್ನ 3 ರಿಂದ ಮಹಾಬಲೇಶ್ವರ ಆರ್.ಹೆಗಡೆ ಹರಿಗಾರು, ಮಂಜುನಾಥ ಕೃ.ಹೆಗಡೆ ಬಣಗಾರು,ಸೀತಾರಾಮ ಚಂದು ಶಿರಸಿ ಹಾಗೂ ಶ್ರೀಧರ ಷಡಕ್ಷರಿ ಆನೆಗುಂದಿ ಅವರನ್ನು ಸನ್ಮಾನಿಸಲಾಗುತ್ತದೆ.
ನಂತರ ರಾಮಾಂಜನೇಯ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಚಂದ್ರಶೇಖರ ಗುರುವಾಯನಕೆರೆ ಸಹಕರಿಸುವರು. ಮುಮ್ಮೇಳದಲ್ಲಿ ವಾಸುದೇವ ರಂಗ ಭಟ್ಟ ಮಧೂರು, ಹರೀಶ ಬೊಳಂತಿಮೊಗರು, ಪವನ ಕಿರಣಕೆರೆ, ಸೀತಾರಾಮ ಚಂದು ಶಿರಸಿ ಹಾಗೂ ಮಂಜುನಾಥ ಗರ‍್ಮನೆ ವಿವಿಧ ಪಾತ್ರನಿರ್ವಹಿಸಲಿದ್ದಾರೆ ಎಂದು ಸಂಘಟಕ ಗಣೇಶ ಹೇರೂರು ತಿಳಿಸಿದ್ದಾರೆ.
ಸೆ.6 ಕ್ಕೆ ಹೇರೂರಿನಲ್ಲಿ ದೇವತಾರಾಧನೆ-ಸನ್ಮಾನ-ತಾಳಮದ್ದಳೆ
