• Slide
  Slide
  Slide
  previous arrow
  next arrow
 • ಆ.15 ರ ನಿಮಿತ್ತ ರಾಷ್ಟ್ರಧ್ವಜದ ‘ಮಾಸ್ಕ್’ಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಜಾಲತಾಣಗಳು- ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ; ಸುರಾಜ್ಯ ಅಭಿಯಾನ

  300x250 AD

  ‘ಭಾರತೀಯ ರಾಷ್ಟ್ರಧ್ವಜ’ವು ಕೋಟ್ಯಂತರ ಭಾರತೀಯರ ಗೌರವದ ವಿಷಯವಾಗಿದೆ; ಕೆಲವು ಅಪವಾದಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಇದನ್ನು ಬಳಸುವುದು ಕಾನೂನು ಪ್ರಕಾರ ದಾಖಲಾರ್ಹ ಮತ್ತು ಜಾಮೀನು ರಹಿತ ಅಪರಾಧವಾಗಿದೆ. ಆದರೂ ಈ ಸಂವೇದನಾಶೀಲ ವಿಷಯದ ಬಗ್ಗೆ ‘ರೆಡ್ ಬಬಲ್’ ನಂತಹ ಇ-ಕಾಮರ್ಸ್ ಜಾಲತಾಣಗಳ ಮೂಲಕ ಅಂಗಡಿಗಳು ಮತ್ತು ಬೀದಿಗಳಲ್ಲಿ ಆಗಸ್ಟ್ 15 ರ ನಿಮಿತ್ತ ಭಾರತೀಯ ರಾಷ್ಟ್ರಧ್ವಜವನ್ನು ಹೋಲುವ ‘ಮಾಸ್ಕ್’ಗಳು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅವರ ಮೇಲೆ ರಾಷ್ಟ್ರಧ್ವಜದ ಅವಮಾನ ಮಾಡಿದ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಿ ಕಾನೂನಿನ ಕ್ರಮ ಕೈಗೊಳ್ಳಬೇಕು, ಅದೇ ರೀತಿ ಮಾಸ್ಕ್‌ನ ಮಾರಾಟ, ಉತ್ಪಾದನೆ ಮತ್ತು ವಿತರಣೆಯಾಗಬಾರದು, ಈ ದೃಷ್ಟಿಯಿಂದ ಸರಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ ಉಪಕ್ರಮದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ ಶಾ ಇವರಲ್ಲಿ ಮನವಿಯ ಮಾಧ್ಯಮದಿಂದ ಆಗ್ರಹಿಸಲಾಗಿದೆ.

  ರಾಷ್ಟ್ರಧ್ವಜವು ಅಲಂಕಾರದ ಸಾಧನವಲ್ಲ. ಈ ರೀತಿಯ ಮಾಸ್ಕ್ ಉಪಯೋಗಿಸಿದರೆ ಸೀನುವಿಕೆ, ಉಗುಳುವುದು, ಅದು ಕೊಳೆಯಾಗುವುದು, ಅದೇ ರೀತಿ ಅವುಗಳನ್ನು ಬಳಸಿದ ನಂತರ ಕೊನೆಗೆ ಕಸದ ಬುಟ್ಟಿಗೆ ಎಸೆಯುವುದು ಇತ್ಯಾದಿಗಳಿಂದ ರಾಷ್ಟ್ರಧ್ವಜದ ಅವಮಾನವಾಗುತ್ತದೆ ಮತ್ತು ಹಾಗೆ ಮಾಡುವುದರಿಂದ ಅದು ‘ರಾಷ್ಟ್ರದ ಗೌರವದ ಪ್ರತೀಕಗಳ ದುರುಪಯೋಗ ತಡೆ ಕಾನೂನು 1950’, ಕಲಂ 2 ಮತ್ತು 5 ಕ್ಕನುಸಾರ; ಅದೇ ರೀತಿ ‘ರಾಷ್ಟ್ರೀಯ ಘನತೆಗೆ ಅವಮಾನ ತಡೆ ಕಾನೂನು 1971’ ರ ಕಲಂ 2 ಕ್ಕನುಸಾರ ಮತ್ತು ‘ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆಯ ತಡೆಗಟ್ಟುವಿಕೆ) ಕಾಯ್ದೆ 1950’ ಈ ಮೂರೂ ಕಾನೂನಿಗನುಸಾರ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಸರಕಾರವು ಈ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಮನವಿಯ ಮೂಲಕ ಆಗ್ರಹಿಸಲಾಗಿದೆ. ಅದೇ ರೀತಿ ಕಳೆದ ವರ್ಷ ಅರುಣಾಚಲ ಪ್ರದೇಶ ಸರಕಾರ ಅಶೋಕ ಚಕ್ರವಿರುವ ಅರವತ್ತು ಸಾವಿರ ತ್ರಿವರ್ಣದ ಮಾಸ್ಕ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿತ್ತು. ಹಾಗೆ ಮಾಡುವುದು ಧ್ವಜಸಂಹಿತೆಯ ಉಲ್ಲಂಘನೆಯಾಗಿದೆ. ಆದ್ದರಿಂದ ಕೇಂದ್ರ ಸರಕಾರವು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ಕಳುಹಿಸಬೇಕು ಅದೇ ರೀತಿ 2011 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮುಂಬಯಿ ಉಚ್ಚ ನ್ಯಾಯಾಲಯವು ನೀಡಿದ ‘ಸರಕಾರವು ರಾಷ್ಟ್ರಧ್ವಜಕ್ಕಾಗುವ ಅವಮಾನವನ್ನು ತಡೆಯುವುದು’ ಈ ಆದೇಶಕ್ಕನುಸಾರ ಕ್ರಮ ಕೈಗೊಳ್ಳಬೇಕು ಎಂದೂ ಸಮಿತಿಯು ನೀಡಿದ ಮನವಿಯಲ್ಲಿ ಹೇಳಿದೆ.

  300x250 AD

  ಈ ಕೆಳಗಿನ ಜಾಲತಾಣಗಳ ಲಿಂಕ್‌ಗಳಲ್ಲಿ ತ್ರಿವರ್ಣಧ್ವಜದ ಮಾಸ್ಕ್ ಮಾರಾಟಕ್ಕೆ ಲಭ್ಯವಿದೆ –

  1.https://www.redbubble.com/i/mask/India-Indian-Flag-Face-Mask-Covid-19-Coronavirus-by-DirtyCustard/47846760.9G0D8

  1. https://uncommongifts.in/products/national-flag-cotton-mask-set-of-2?variant=35410155765909¤cy=INR&utm_medium=product_sync&utm_source=google&utm_content=sag_organic&utm_campaign=sag_organic&gclid=CjwKCAjwpMOIBhBAEiwAy5M6YJm_d0Z_wHtqGdMAWO0PAn_fDaZACU3nbax8zMYlthKW5YUONTRrFBoCM8sQAvD_BwE
  2. https://www.dreamstime.com/corona-virus-quarantine-pandemic-covid-protective-medical-mask-india-flag-tri-colour-new-image181236281
  Share This
  300x250 AD
  300x250 AD
  300x250 AD
  Leaderboard Ad
  Back to top