Slide
Slide
Slide
previous arrow
next arrow

ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ

300x250 AD

ಮುಂಡಗೋಡ : ದೇವಸ್ಥಾನ ಕಳ್ಳತನ, ಮನೆಕಳ್ಳತನ ಹಾಗೂ ದರೋಡೆ ಪ್ರಕರಣಗಳು ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ‌‌‌ ಕಳ್ಳರನ್ನು ಬಂಧಿಸುವಲ್ಲಿ ಮುಂಡಗೋಡ ಪೋಲೀಸರು ಸಫಲರಾಗಿದ್ದಾರೆ.

ತಾಲೂಕಿನ ಕೊಪ್ಪ ಗ್ರಾಮದಲ್ಲಿ ದೇವಸ್ಥಾನಕಳ್ಳತನ, ಬೆಡಸಗಾಂವ ಹಾಗೂ ಕಲಕೊಪ್ಪ ಗ್ರಾಮಗಳಲ್ಲಿ ಮನೆಕಳ್ಳತನ ಮತ್ತು ಮುಂಡಗೋಡ- ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನಡೆದ ದರೋಡೆ ಪ್ರಕರಣಗಳಲ್ಲಿ ಬಂಧಿತ ಕಳ್ಳರ ಗ್ಯಾಂಗ್ ನ ಕೈವಾಡ ಇದ್ದು ಕಳ್ಳರನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.

ಬಂಧಿತರನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ‌ ಶೃಂಗೇರಿಯ ಅಬ್ದುಲ್ ಸತ್ತಾರ, ಶ್ರೀಧರ ಬಂಡಿವಡ್ಡರ್ ಎಂದು ಗುರುತಿಸಲಾಗಿದ್ದು , ಅವರಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ 30ಗ್ರಾಂ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟೂ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

300x250 AD

ಕಾರ್ಯಾಚರಣೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಎಡಿಶನಲ್ ಎಸ್.ಪಿ ಎಸ್.ಬದರಿನಾಥ ಹಾಗೂ ಡಿಎಸ್‌ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭುಗೌಡ ಡಿ.ಕೆ ಅವರ ನೇತೃತ್ವದಲ್ಲಿ ಪಿಎಸ್‌ಐ ಬಸವರಾಜ ಮಬನೂರ, ನಿಂಗಪ್ಪ ಜಕ್ಕಣ್ಣವರ ಹಾಗೂ ಸಿಬ್ಬಂದಿಗಳಾದ ಧರ್ಮರಾಜ, ಗಣಪತಿ, ವಿನಾಯಕ, ತಿರುಪತಿ, ವಿನೋದಕುಮಾರ, ಅರುಣಕುಮಾರ, ಅಣ್ಣಪ್ಪ ಹಾಗೂ ಶರತಕುಮಾರ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top