ನ ಲಭಂತೇ ವಿನೋದ್ಯೋಗಂ ಜಂತವಃ ಸಂಪದಾಂ ಪದಮ್
ಸುರಾಃ ಕ್ಷೀರೋದವಿಕ್ಷೋಭಮನುಭೂಯಾಮೃತಂ ಪಪುಃ ||
ಇಹಕ್ಕೆ ಬಂದಮೇಲೆ ವಿಹಿತವಾದ ಉದ್ಯೋಗವನ್ನು ಮಾಡಲೇ ಬೇಕು. ಉದ್ಯಮವಿಲ್ಲದೆ, ಅಂದರೆ ಕೆಲಸ ಮಾಡದೇನೆ ಯಾವೊಬ್ಬ ಮಾನವನೂ ಸಂಪತ್ತನ್ನು ಹೊಂದಲಾರ. ದೇವತೆಗಳಂತಾ ದೇವತೆಗಳೇ ಅಮೃತವನ್ನು ಪಡೆಯುವುದಕ್ಕೆ ಅದೆಷ್ಟೆಲ್ಲ ಉದ್ಯಮ ಮಾಡಬೇಕಾಯಿತು! ಅಸುರರೊಡಗೂಡಿ, ವಾಸುಕಿಯನ್ನೂ ಮಂದರನನ್ನೂ ಒಪ್ಪಿಸಿ, ಕೂರ್ಮಾವತಾರಕ್ಕಾಗಿ ಬೇಡಿ, ಹಾಲ್ಗಡಲನ್ನು ಕಡೆದು, ವಿಷವನ್ನೂ ಸೇರಿದಂತೆ ಬಂದಿದ್ದೆಲ್ಲವನ್ನೂ ಅದು ಹೇಗೋ ನಿರ್ವಹಣೆ ಮಾಡಿ ಅಂತೂ ಕೊನೆಯಲ್ಲಿ ಅಮೃತವನ್ನು ಪಡೆದು ಕುಡಿದರು. ದೇವತೆಗಳಂತಾ ದೇವತೆಗಳಿಗೇ ತಮ್ಮ ಇಷ್ಟಪೂರ್ತಿಗಾಗಿ ಇಷ್ಟೆಲ್ಲ ಉದ್ಯಮಪಡುವ ಅಗತ್ಯಬೀಳುತ್ತದೆ ಅಂತಾದಮೇಲೆ ಇನ್ನು ಹುಲುಮಾನವರ ವಿಚಾರದಲ್ಲಿ ಹೇಳುವುದುಂಟೇನು?
ಶ್ರೀ ನವೀನ ಗಂಗೋತ್ರಿ
ಸುವಿಚಾರ
