Slide
Slide
Slide
previous arrow
next arrow

ರಿಲಾಯನ್ಸ್‌ ಜಿಯೋ ಮುಖ್ಯಸ್ಥನಾಗಿ ಆಕಾಶ್‌ ಅಂಬಾನಿ ನೇಮಕ: ಮುಕೇಶ್‌ ಅಂಬಾನಿ ರಾಜೀನಾಮೆ

300x250 AD

ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ಅಂಗವಾದ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಮುಖ್ಯಸ್ಥ ಸ್ಥಾನಕ್ಕೆ ಮುಖೇಶ್ ಅಂಬಾನಿ ಅವರು ಜೂನ್ 27 ರಿಂದ ಅನ್ವಯವಾಗುವಂತೆ ರಾಜೀನಾಮೆ ನೀಡಿದ್ದಾರೆ.  ಅವರ ಪುತ್ರ ಆಕಾಶ್‌ ಅಂಬಾನಿ ಈ ಸ್ಥಾನಕ್ಕೆ ನೇಮಕವಾಗಿದ್ದಾರೆ.

ರಿಲಾಯನ್ಸ್ ಜಿಯೋ ಕಂಪನಿಯ ಮಂಡಳಿಯು ಜೂನ್ 27 ರಂದು ನಡೆದ ಸಭೆಯಲ್ಲಿ, ಕಾರ್ಯನಿರ್ವಾಹಕೇತರ ನಿರ್ದೇಶಕರಾದ ಆಕಾಶ್ ಎಂ ಅಂಬಾನಿ ಅವರನ್ನು ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

 ಪಂಕಜ್ ಮೋಹನ್ ಪವಾರ್ ಅವರು ಜೂನ್ 27 ರಿಂದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಮೀಂದರ್ ಸಿಂಗ್ ಗುಜ್ರಾಲ್ ಮತ್ತು ಕೆವಿ ಚೌಧರಿ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

300x250 AD

2021 ರಲ್ಲಿ,ನಾಯಕತ್ವ ಬದಲಾವಣೆಯ ಭಾಗವಾಗಿ ತಮ್ಮ ಮಕ್ಕಳು ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅಂಬಾನಿ ಹೇಳಿದ್ದರು.

ಕೃಪೆ-https://news13.in/

Share This
300x250 AD
300x250 AD
300x250 AD
Back to top