ಹೊನ್ನಾವರ:ತಾಲೂಕಿನ ಚಂದಾವರದ ಸುಲ್ತಾನಕೇರಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಈರ್ವರು ಹಲ್ಲೆಪಡಿಸಿ,ಜೀವಬೆದರಿಕೆ ಹಾಕಿರುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಂದಾವರದ ಸುಲ್ತಾನಕೇರಿಯ ನಿವಾಸಿ ಮಹಮ್ಮದ ಶರೀಪ್ ಅಬ್ದುಲ್ ಖಾದರ್ ಸಂಶಿ ಇವರು ಮೇ.3 ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಚಂದಾವರದ ಸುಲ್ತಾನಕೇರಿಯಲ್ಲಿರುವ ಮಸೀದಿಯ ಬಳಿ ಹೋಗುತ್ತಿದ್ದರು. ಈ ವೇಳೆ ಆರೋಪಿತ ಚಂದಾವರದ ಆಸೀಪ್ ಅಲಿ ಅಬ್ದುಲ್ ಗಪಾರ್ ಘನಿ,ಇನ್ನೊರ್ವ ಚಂದಾವರ ಹಾಲಗದ್ದೆ ನಿವಾಸಿ ಜಮಾಲಸಾಬ ಜಾನೆಜಾನ್ ಇಬ್ರಾಹಿಂ ಶೇಖ್ ಇವರುಗಳು ಮಸೀದಿ ರಸ್ತೆಯಲ್ಲಿ ಮಹಮ್ಮದ ಶರೀಪ್ ಅವರನ್ನು ಅಡ್ಡಗಟ್ಟಿ ತಡೆದು, ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.