ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಯೂ-ಟರ್ನ್ ಬಳಿ ರಸ್ತೆಗೆ ಅಳವಡಿಸಿದ ಡಿವೈಡರ್ಗಳು ಅಸ್ತವ್ಯಸ್ತಗೊಂಡಿದ್ದು ವಾಹನಗಳ ಓಡಾಟಕ್ಕೆ ಭಾರಿ ತೊಂದರೆ ಉಂಟಾಗುತ್ತಿದೆ. ಅಪಘಾತ ವಲಯವಾಗಿರುವ ಯೂಟರ್ನ್ ಬಳಿ ಡಿವೈಡರ್ ಗಳನ್ನು ಸಂಬಂಧಪಟ್ಟ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣವೇ ಸರಿಪಡಿಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಇಡಗುಂದಿ ಭಾಗದ ಅಧ್ಯಕ್ಷ ಮಹೇಶ ನಾಯ್ಕ ವಿನಂತಿಸಿದ್ದಾರೆ.