Slide
Slide
Slide
previous arrow
next arrow

ಕರಾಟೆ ಪಟು ಅಶ್ವಿಜ್ ದಂಡಗಲ್‌ ಗೆ ಸನ್ಮಾನ

300x250 AD

ದಾಂಡೇಲಿ: ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಗರದ ಕರಾಟೆ ಪಟು ಅಶ್ವಿಜ್ ದಂಡಗಲ್‌ನನ್ನು ಮಾತೃಭೂಮಿ ಸಂಘಟನೆಯ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಆಶ್ರಯದಲ್ಲಿ ಸನ್ಮಾನಿಸಲಾಯಿತು.

ಸಾಧನೆ ವೀರ ಅಶ್ವಿಜ್ ದಂಡಗಲ್‌ನಿಗೆ ಹೂ ಹಾರ ಹಾಕಿ, ಪೇಟ ತೊಡಿಸಿ, ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯ್ತು. ಇದೇ ಸಂದರ್ಭದಲ್ಲಿ ಅಶ್ವಿಜ್‌ನ ಸಾಧನೆಗೆ ಪ್ರೇರಕಶಕ್ತಿಗಳಾದ ಪಾಲಕರಾದ ಅನಿಲ್ ದಂಡಗಲ್ ದಂಪತಿಯನ್ನು ಸನ್ಮಾನಿಸಲಾಯಿತು.

300x250 AD

ಮಾತೃಭೂಮಿ ಸಂಘಟನೆಯ ರಾಜ್ಯಾಧ್ಯಕ್ಷ ಸಂತೋಷ ಕಟಗಿ, ಪ್ರಮುಖರುಗಳಾದ ರವೀಂದ್ರ ಶಾಹ, ರಮೇಶ ಹೊಸಮನಿ, ರಾಹುಲ್ ಬನಸೋಡೆ, ಪ್ರಶಾಂತ ಕುಲಕರ್ಣಿ, ಪರಶುರಾಮ ಮಾದಿಗ, ಪ್ರಶಾಂತ್ ನಾಯ್ಕ, ದೀಪಕ್ ಕಾಕ್ತಿಕರ್, ಪ್ರಶಾಂತ.ಎ.ನಾಯ್ಕ, ಪರಶುರಾಮ ಮುಟವಾಡ, ಶಿವಾನಂದ ಮಿಟಗಿ, ಶಾಂತಕುಮಾರಿ, ರಾಕೇಶ ಗಡ್ಕರ್, ಸಂದೀಪ್ ಗಾಂವಕರ, ಸಂದೀಪ್ ಮಹಾಜಿಕ್, ವಿಠ್ಠಲ್ ವಾಟ್ಲೇಕರ, ಶಿವಕುಮಾರ್ ಶಶಿಮಠ ಮೊದಲಾದವರು ಇದ್ದರು.

Share This
300x250 AD
300x250 AD
300x250 AD
Back to top