• Slide
    Slide
    Slide
    previous arrow
    next arrow
  • 2025ರ ಮಹಾಕುಂಭ ಮೇಳಕ್ಕೆ ಯುಪಿ ಸರ್ಕಾರದಿಂದ 100 ಕೋಟಿ ಬಜೆಟ್

    300x250 AD

    ನವದೆಹಲಿ: 2025ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳದ ಸಿದ್ಧತೆಗಾಗಿ ಉತ್ತರಪ್ರದೇಶ ಸರ್ಕಾರ 100 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದು, ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ.

    ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಎಲ್ಲ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ತ್ವರಿತಗತಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ

    2025ರಲ್ಲಿ ನಡೆಯಲಿರುವ ಮಹಾಕುಂಭವನ್ನು ಯಶಸ್ವಿಗೊಳಿಸುವ ಯಾವುದೇ ಅವಕಾಶವನ್ನು ಕೈಬಿಡಲು ಯೋಗಿ ಸರ್ಕಾರ ಸಿದ್ಧವಿಲ್ಲ. ಸಂಗಮ್ ದಂಡೆಯಲ್ಲಿ ಪಕ್ಕಾ ಘಾಟ್‌ಗಳನ್ನು ನಿರ್ಮಿಸಲಾಗುತ್ತಿದೆ, ಮೇಳದ ಸ್ಥಳದಲ್ಲಿ ಸ್ವಚ್ಛತಾ ಪ್ರಯತ್ನಗಳು ಮತ್ತು ನಗರದ ರಸ್ತೆಗಳ ಅಗಲೀಕರಣವನ್ನು ಪೂರ್ಣಗೊಳಿಸಲಾಗುತ್ತಿದೆ. ಮೇಳ ಪ್ರದೇಶದಲ್ಲಿ ಫುಡ್ ಕೋರ್ಟ್‌ಗಳು, ಪ್ರದರ್ಶನಗಳು, ವಾಟರ್ ಸ್ಪಾಟ್‌ಗಳು ಮುಂತಾದ ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದ್ದು, ಈಗಿನಿಂದಲೇ ತಯಾರಿ ಆರಂಭಿಸಿದೆ.

    300x250 AD

    ಯೋಗಿ ಸರ್ಕಾರವು 2019 ರಲ್ಲಿ ಕುಂಭವನ್ನು ಯಶಸ್ವಿಯಾಗಿ ಆಯೋಜಿಸಿ ಉತ್ತರಪ್ರದೇಶ ಜಾಗತಿಕ ಮನ್ನಣೆಯನ್ನು ಸಾಧಿಸಿಸುವಂತೆ ಮಾಡಿತ್ತಯ. ಸಿಎಂ ಯೋಗಿ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಿಂದ ರಾಜ್ಯದ ಗೌರವ, ದಕ್ಷತೆ ಹೆಚ್ಚಾಗಿತ್ತು, ಸ್ವಚ್ಛತೆಗೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಮಾರ್ಗದಲ್ಲಿ ಮುಂಬರುವ ಮಹಾಕುಂಭದ ಸಿದ್ಧತೆಗೆ ಸರ್ಕಾರ ಒತ್ತು ನೀಡುತ್ತಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top