Slide
Slide
Slide
previous arrow
next arrow

ಶಾಸಕ ಭೀಮಣ್ಣ ಮೇಲೆ ಜೇನು ದಾಳಿ; ಆತಂಕ ಬೇಡ

300x250 AD

ಶಿರಸಿ: ತಾಲೂಕಿನ ಕೆಂಗ್ರೆಹೊಳೆ ಬಳಿ ನೀರಿನ ಮಟ್ಟ ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ್ ಹಾಗೂ ನಗರಸಭೆ ಪೌರಾಯುಕ್ತ ಕಾಂತರಾಜ ಹಾಗೂ ನಗರಸಭೆ ಸದಸ್ಯ ಖಾದರ ಆನವಟ್ಟಿ ಮೇಲೆ ಏಕಾಏಕಿ ಜೇನು ಹುಳುಗಳು ದಾಳಿ ನಡೆಸಿವೆ.

ಜೇನು ದಾಳಿಯಿಂದ ಮೂವರೂ ಸಣ್ಣಪುಟ್ಟ ಗಾಯಗೊಂಡಿದ್ದು, ತಕ್ಷಣ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದ್ದು, ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂಬ ಮಾಹಿತಿ ಲಭಿಸಿದೆ.

300x250 AD
Share This
300x250 AD
300x250 AD
300x250 AD
Back to top