Slide
Slide
Slide
previous arrow
next arrow

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ; ಮತಗಟ್ಟೆಗೆ ಬಂದು ಮತ ಚಲಾಯಿಸಿದ ವೃದ್ಧೆ

300x250 AD

ಸಿದ್ದಾಪುರ: ತಾಲೂಕಿನ ಅಣಲೇಬೈಲ್ ಗ್ರಾ.ಪಂ ವ್ಯಾಪ್ತಿಯ ಅತ್ತೀಮುರ್ಡು ಗ್ರಾಮದ ಕಂಚೀಮನೆಯ ವೃದ್ಧೆ ಭವಾನಿ ಮಂಜುನಾಥ ಹೆಗಡೆ (89 ವರ್ಷ) ಮತದಾನ ಮಾಡಿದರು. ಎದ್ದು ನಿಲ್ಲಲು, ಓಡಾಡಲು ಸಾಧ್ಯವಿಲ್ಲದಿದ್ದರೂ ಮತದಾನ ಮಾಡಿ, ಯುವಕರಲ್ಲಿ ಮತದಾನದ ಮಹತ್ವ ಸಾರಿದರು.

ಅಶಕ್ತರಿಗೆ, ವಯೋವೃದ್ಧರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರೂ ಸಹ ಸ್ಥಳೀಯ ಆಡಳಿತದ ಯಾವ ಅಧಿಕಾರಿಯೂ ಸಹ ಸ್ಪಂದಿಸಿಲ್ಲ.ಮತಗಟ್ಟೆ ಅಧಿಕಾರಿಗೆ ಈ ಮೊದಲೇ ಮಾಹಿತಿ ನೀಡಿದಾಗಲೂ ಯಾವುದೇ ಪ್ರಯೋಜನವಾಗಿಲ್ಲ. ಮತಗಟ್ಟೆ ಅಧಿಕಾರಿಯಾಗಲೀ ಕಂದಾಯ ಇಲಾಖೆ ಅಥವಾ ಇನ್ನಾವುದೇ ಇಲಾಖೆಯ ಯಾವುದೇ ಅಧಿಕಾರಿಗಳೂ ಸಹ ಮನೆಯಿಂದ ಮತ ಚಲಾಯಿಸುವ ಅವಕಾಶವನ್ನೇ ಕಲ್ಪಿಸಿಲ್ಲ ಎನ್ನುವುದು ಖೇದಕರವಾಗಿದೆ.

300x250 AD
Share This
300x250 AD
300x250 AD
300x250 AD
Back to top