• Slide
    Slide
    Slide
    previous arrow
    next arrow
  • ಚಾರ್ ಧಾಮ್,ಹೇಮಕುಂಡ್ ಯಾತ್ರೆ ಸರಾಗ: ಅಗತ್ಯ ವ್ಯವಸ್ಥೆಗಳ ವಿಸ್ತರಣೆಗೆ ಸೂಚನೆ

    300x250 AD

    ನವದೆಹಲಿ: ಉತ್ತರಾಖಂಡದ ಚಾರ್‌ಧಾಮ್ ಮತ್ತು ಹೇಮಕುಂಡ್ ಯಾತ್ರೆ ಸರಾಗವಾಗಿ ನಡೆಯುತ್ತಿದ್ದು, ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ದೇಶ, ವಿದೇಶಗಳಿಂದ ಯಾತ್ರಾರ್ಥಿಗಳ ಆಗಮನ ಪ್ರಕ್ರಿಯೆ ಮುಂದುವರಿದಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತವು ಅಗತ್ಯ ವ್ಯವಸ್ಥೆಗಳನ್ನು ವಿಸ್ತರಿಸಲು ಮತ್ತು ಸುಧಾರಿಸುವ ಕಾರ್ಯದಲ್ಲಿ ತೊಡಗಿದೆ.

    ಮತ್ತೊಂದೆಡೆ ಕೇದಾರನಾಥದಲ್ಲಿ ಹಿಮಪಾತ ಹಾಗೂ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಶೆಡ್‌ಗಳನ್ನು ಅಳವಡಿಸುವಂತೆ ಮುಖ್ಯ ಕಾರ್ಯದರ್ಶಿ ಡಾ.ಎಸ್.ಎಸ್.ಸಂಧು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರೊಂದಿಗೆ ಸಂಚಾರ ಮಾರ್ಗಗಳನ್ನು ನಿರ್ಬಂಧಿಸಿದರೆ ತಕ್ಷಣವೇ ತೆರೆಯುವಂತೆ ಸೂಚನೆ ನೀಡಿದ್ದಾರೆ.

    300x250 AD

    ಈ ನಡುವೆ, ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಅವರು ಯಾತ್ರೆಯ ಮಾರ್ಗವನ್ನು ಟ್ರಾಫಿಕ್ ಜಾಮ್ ನಿಂದ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top