Slide
Slide
Slide
previous arrow
next arrow

ಯೋಗಿ ಸಿಎಂ ಆಗಿ ಬಂದ 15 ದಿನಗಳಲ್ಲಿ ಶರಣಾದ 50 ಕ್ರಿಮಿನಲ್‌ಗಳು

300x250 AD

ನವದೆಹಲಿ:ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಮರಳಿದ ಹದಿನೈದು ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು 50 ಕ್ರಿಮಿನಲ್‌ಗಳು ಶರಣಾಗಿದ್ದಾರೆ.

‘ನಾನು ಶರಣಾಗುತ್ತಿದ್ದೇನೆ, ದಯವಿಟ್ಟು ಗುಂಡು ಹಾರಿಸಬೇಡಿ’ ಎಂಬ ಫಲಕಗಳನ್ನು ಕೊರಳಿಗೆ ನೇತು ಹಾಕಿಕೊಂಡು ಆರೋಪಿಗಳು ಪೊಲೀಸ್ ಠಾಣೆಗೆ ಬಂದಿದ್ದಾರೆ ಎನ್ನಲಾಗಿದೆ.

50 ಕ್ರಿಮಿನಲ್‌ಗಳು ಶರಣಾಗಿರುವುದು ಮಾತ್ರವಲ್ಲದೆ ಅಪರಾಧವನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ನಡುವೆ, ಇಬ್ಬರು ಕ್ರಿಮಿನಲ್‌ಗಳನ್ನು ಹೊಡೆದುರುಳಿಸಲಾಗಿದ್ದು, ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದಾಗಿನಿಂದ 10 ಮಂದಿಯನ್ನು ಬಂಧಿಸಲಾಗಿದೆ.

“ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು, ರಾಜ್ಯದ ಮೂಲೆ ಮೂಲೆಯಲ್ಲಿರುವ ಅಪರಾಧಿಗಳಲ್ಲಿ ಭಯವನ್ನು ಹುಟ್ಟುಹಾಕಲು ಸೂಕ್ಷ್ಮ-ಯೋಜನೆಯ ಮೂಲಕ ತ್ವರಿತ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ADG, ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್ ಅವರು ಹೇಳಿದ್ದಾರೆ.

300x250 AD

“ಅಪರಾಧಕ್ಕೆ ಶೂನ್ಯ ಸಹಿಷ್ಣುತೆ ಕೇವಲ ಮಾಫಿಯಾ ವಿರುದ್ಧದ ಪರಿಣಾಮಕಾರಿ ಶಿಸ್ತುಕ್ರಮವಲ್ಲ, ನವೀಕೃತ ಜಾಗರೂಕತೆ ಮತ್ತು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸುವುದು,” ಎಂದಿದ್ದಾರೆ.

ಮಾರ್ಚ್ 15 ರಂದು ಗೊಂಡಾ ಜಿಲ್ಲೆಯ ಛಾಪಿಯಾ ಪೊಲೀಸ್ ಠಾಣೆಯಲ್ಲಿ ಅಪಹರಣಕಾರ ಮತ್ತು ಸುಲಿಗೆಕೋರ ಗೌತಮ್ ಸಿಂಗ್ ಶರಣಾಗುವುದರೊಂದಿಗೆ ಈ ಟ್ರೆಂಡ್ ಪ್ರಾರಂಭವಾಯಿತು. ಅಂದಿನಿಂದ ರಾಜ್ಯದಾದ್ಯಂತ ವಿವಿಧ ಹಿನ್ನೆಲೆಯ ಹಲವಾರು ಅಪರಾಧಿಗಳು ಶರಣಾಗಿದ್ದಾರೆ.

Share This
300x250 AD
300x250 AD
300x250 AD
Back to top