Slide
Slide
Slide
previous arrow
next arrow

ಮೇ.11ಕ್ಕೆ ಸ್ವರ್ಣವಲ್ಲೀಯಲ್ಲಿ, 12ಕ್ಕೆ ಶಿರಸಿಯಲ್ಲಿ ‘ಶಂಕರ ಜಯಂತಿ’

300x250 AD

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಹಾಗೂ ಯೋಗ ಮಂದಿರ ಜಂಟಿಯಾಗಿ ನಡೆಸುವ ಶ್ರೀಶಂಕರ ಜಯಂತಿ ಮೇ.11ರಂದು ಸೋಂದಾ ಸ್ವರ್ಣವಲ್ಲಿಯಲ್ಲಿ ,12ರಂದು ಶಿರಸಿ ಯೋಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೇ.11ರಂದು ಬೆಳಿಗ್ಗೆ 10ರಿಂದ ಶ್ರೀ ಶಂಕರ ಸಮಗ್ರ ಸ್ತೋತ್ರ ಪಾರಾಯಣ ಮಾತೆಯರಿಂದ ಹಾಗೂ ಸಂಜೆ 4.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹಾಗೂ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳು ಸಾನ್ನಿಧ್ಯ ನೀಡಲಿದ್ದಾರೆ. ಹುಬ್ಬಳ್ಳಿ ಅದ್ವೈತ ವಿದ್ಯಾಶ್ರಮದ ಶ್ರೀಪ್ರಣವಾನಂದತೀರ್ಥ ಮಹಾಸ್ವಾಮೀಜಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಧನಾ ಶಂಕರ ಪ್ರಶಸ್ತಿಯನ್ನು ಕಲಬುರಗಿಯ ಶ್ರೀಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ಟ ಐನಕೈ ಅವರಿಗೆ ಪ್ರದಾನ ಮಾಡಲಾಗುತ್ತದೆ. ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಮಾತೆಯರು ಸಾಮೂಹಿಕವಾಗಿ ಶ್ರೀಗಣೇಶ ಪಂಚರತ್ನ ಹಾಗೂ ಶ್ರೀಶಾರದಾ ಭುಜಂಗ, ಶ್ರೀತೋಟಕಾಷ್ಟಕ ಸ್ತೋತ್ರ ಪಠಿಸಲಿದ್ದಾರೆ.

ಮೇ.12ರಂದು ಬೆಳಿಗ್ಗೆ 9 ಗಂಟೆಯಿಂದ ಸ್ವರ್ಣವಲ್ಲೀ‌ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಶ್ರೀಶಂಕರ ದಿಗ್ವಿಜಯ, ಜ್ಞಾನ ದೀಪಿಕಾ ಸೇರಿದಂತೆ ವಿವಿಧ ಪಾರಾಯಣಗಳು ಕೂಡ ನಡೆಯಲಿವೆ.

300x250 AD

ಸಂಜೆ 4ಕ್ಕೆ ಶಿರಸಿ ಯೋಗ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹಾಗೂ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳು ಸಾನ್ನಿಧ್ಯ ನೀಡಲಿದ್ದಾರೆ. ಬೆಂಗಳೂರು ರಾಮಕೃಷ್ಣ ಮಠದ ಶ್ರೀವೀರೇಶಾನಂದ ಸ್ವಾಮೀಜಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಕಟಪುರಂ ಸಂಸ್ಥಾನದ ಆಸ್ಥಾನ ವಿದ್ವಾನ್ ವಿದ್ಯಾಭೂಷಣ ಮಧುಸೂದನ ಶಾಸ್ತ್ರಿ ಹಂಪಿಹೊಳಿ ಇವರಿಗೆ ಸಾಧನಾ ಶಂಕರ ಪ್ರಶಸ್ತಿ ಪ್ರದಾನ ನಡೆಯಲಿದೆ.
ರಾತ್ರಿ ೯ರಿಂದ ಹೊನ್ನಾವರದ ಮೇಲಿನ ಮಣ್ಣಿಗೆಯ ಶ್ರೀಗಜಾನನ ಕಲೆ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಕಲಾವಿದರು ಪ್ರಸ್ತುತಗೊಳಿಸುವ ‘ವರದಪುರದ ವರದಯೋಗಿ’ ನಾಟಕ ಪ್ರದರ್ಶನ ಕಾಣಲಿದೆ ಎಂದು ಶ್ರೀಸಂಸ್ಥಾನದ ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top