Slide
Slide
Slide
previous arrow
next arrow

ಅಂಗನವಾಡಿ ಕಾರ್ಯಕರ್ತೆಯರ ಸಂಬಳಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ

300x250 AD

ಸಿದ್ದಾಪುರ : ಮತಗಟ್ಟೆಯಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ನೀಡುವಂತೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸ್ವತಂತ್ರ ಸಂಘದ ಸಿದ್ದಾಪುರ ತಾಲೂಕ ಘಟಕದವರು ತಹಸೀಲ್ದಾರ್ ರಿಗೆ ಶನಿವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕ ಅಧ್ಯಕ್ಷೆ ಯಮುನಾ ನಾಯ್ಕ್ ಮಾತನಾಡಿ ಚುನಾವಣೆಯಲ್ಲಿ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುವಂತೆ ಇಲಾಖೆಯು ಆದೇಶ ಮಾಡುತ್ತದೆ ಆದರೆ ಅಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಂಬಳವನ್ನು ನೀಡದಿರುವುದಿಲ್ಲ ಹಾಗಾಗಿ ಈ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲರಿಗೂ ಸಂಬಳವನ್ನು ನೀಡಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ರೇಖಾ ಭಟ್, ಸುಮಂಗಲ, ಪ್ರಭಾವತಿ ನಾಯ್ಕ್ ಮತ್ತಿತರರು ಇದ್ದರು .

300x250 AD
Share This
300x250 AD
300x250 AD
300x250 AD
Back to top