Slide
Slide
Slide
previous arrow
next arrow

ಟಿಪ್ಪು ವೈಭವೀಕರಣವನ್ನು ಪಠ್ಯದಿಂದ ತೆಗೆದುಹಾಕಲು ಚಿಂತನೆ

300x250 AD

ಬೆಂಗಳೂರು: ಕರ್ನಾಟಕ ಸರ್ಕಾರವು 18 ನೇ ಶತಮಾನದಲ್ಲಿ ಮೈಸೂರನ್ನು ಆಳಿದ ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಅಧ್ಯಾಯಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶುಕ್ರವಾರ ಮಾತನಾಡಿ, ಸಮಿತಿಯ ವರದಿಯು ರಾಜ್ಯದಲ್ಲಿನ ಪಠ್ಯಪುಸ್ತಕಗಳಲ್ಲಿ ವಿಶೇಷವಾಗಿ ಟಿಪ್ಪು ಸುಲ್ತಾನನ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಶಿಫಾರಸು ಮಾಡಿದೆ ಎಂದಿದ್ದಾರೆ.

“ಸಮಿತಿಯ ವರದಿಯನ್ನು ಸ್ವೀಕರಿಸಿದ್ದೇನೆ. ಚರ್ಚೆಯ ನಂತರ ಮುಂದಿನ ಶೈಕ್ಷಣಿಕ ವರ್ಷದಿಂದ ವರದಿ ಜಾರಿಗೆ ತರಲಾಗುವುದು” ಎಂದಿದ್ದಾರೆ. 18 ನೇ ಶತಮಾನದ ಆಡಳಿತಗಾರ ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದಂತೆ ಇತಿಹಾಸದ ಪಾಠಗಳಲ್ಲಿ ಬದಲಾವಣೆಗಳನ್ನು ತರಲು ವರದಿಯು ಪ್ರಸ್ತಾಪಿಸಿದೆ ಎನ್ನಲಾಗಿದೆ.

300x250 AD

ಹಿಜಾಬ್ ವಿವಾದ ಮತ್ತು ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲಿನ ನಿಷೇಧದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ವಿಷಯಗಳನ್ನು ನಿರ್ವಹಿಸುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ, ಸಮಿತಿಯು ಟಿಪ್ಪು ಸುಲ್ತಾನನ ಅಧ್ಯಾಯವನ್ನು ಉಳಿಸಿಕೊಳ್ಳಬೇಕು  ಆದರೆ ಆಡಳಿತಗಾರನನ್ನು ‘ವೈಭವೀಕರಿಸುವ’ ಕೆಲವು ಭಾಗಗಳನ್ನು ತೆಗೆದುಹಾಕಬೇಕು ಎಂದು ಉಲ್ಲೇಖಿಸಿದೆ ಎಂದು ತಿಳಿಸಿವೆ.  ಯಾವ ಭಾಗಗಳನ್ನು ತೆಗೆದುಹಾಕಲಾಗುತ್ತದೆ ಎಂಬ ವಿವರಗಳು ಲಭ್ಯವಿಲ್ಲ.

Share This
300x250 AD
300x250 AD
300x250 AD
Back to top