• Slide
    Slide
    Slide
    previous arrow
    next arrow
  • 3 ತಿಂಗಳು ಉಚಿತ ಪಡಿತರ ವಿಸ್ತರಣೆ; ಯೋಗಿ ಘೋಷಣೆ

    300x250 AD

    ನವದೆಹಲಿ: ಉತ್ತರ ಪ್ರದೇಶದ ಜನಪ್ರಿಯ ‘ಉಚಿತ ಪಡಿತರ ಯೋಜನೆ’ಯನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಘೋಷಿಸಿದ್ದಾರೆ.

    ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎರಡನೇ ಅವಧಿಯ ಸರ್ಕಾರದ ಕಾರ್ಯಾಚರಣೆಗಳ ಕುರಿತು ಚರ್ಚಿಸಲು ನಡೆಸಲಾದ ಈ ಸಭೆಯಲ್ಲಿ, ಉತ್ತರಪ್ರದೇಶ ಸರ್ಕಾರವು ಉಚಿತ ಪಡಿತರ ವಿತರಣೆಗೆ  3,270 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ನಿರ್ಧರಿಸಿದೆ, ಇದು 15 ಕೋಟಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಯುಪಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಲಕ್ನೋದಲ್ಲಿ ಹೇಳಿದ್ದಾರೆ.

    300x250 AD

    “ಇಂದಿನ ಸಂಪುಟ ಸಭೆಯಲ್ಲಿ, ನಾವು ಮುಂದಿನ 3 ತಿಂಗಳವರೆಗೆ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ. ಇದು ರಾಜ್ಯದ 15 ಕೋಟಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ” ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಹೇಳಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top