ಶಿರಸಿ: ಕಾಂಗ್ರೆಸ್ ಸರಕಾರದ 5 ಗ್ಯಾರಂಟಿಗಳನ್ನು ಜನರು ತಿರಸ್ಕರಿಸಬೇಕೆನ್ನುವ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಕಿಡಿಕಾರಿದರು.
ಅವರು ತಾಲೂಕಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಮ್ಮ ಸರಕಾರ ಮಹಿಳೆಯರಿಗೆ ಸ್ವಾವಲಂಬಿತನವನ್ನು ತುಂಬಲು, ಬಡವರ ಆರ್ಥಿಕ ಮಟ್ಟವನ್ನು ಸುಧಾರಿಸಲು ಜಾರಿಗೆ ತಂದಿರುವ ಯೋಜನೆಯನ್ನು ತಿರಸ್ಕರಿಸಿ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಯಾವ ಬಾಯಿಂದ ಹೇಳುತ್ತಾರೆ? ಬಿಜೆಪಿಯಲ್ಲಿ ಒಬ್ಬರು ಮಹಿಳೆಯರ ತಾಳಿ ಬಗ್ಗೆ ಮಾತನಾಡಿದರೆ, ಇನ್ನೊಬ್ಬರು ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ನಮ್ಮ ಗ್ಯಾರಂಟಿಗಳಿಂದ ಜನರು ತಾಳಿನೂ ಮಾಡಿಕೊಳ್ಳುತ್ತಿದ್ದಾರೆ,ಹೊಟ್ಟೆನೂ ತುಂಬಿಸಿಕೊಳ್ಳುತ್ತಿದ್ದಾರೆ,ನೆರಳು ಕಂಡುಕೊಳ್ಳುತ್ತಿದ್ದಾರೆ ಮುಖ್ಯವಾಗಿ ಶಿಕ್ಷಣವೂ ಪಡೆಯುತ್ತಿದ್ದಾರೆ, ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಯೋಜನೆಗಳನ್ನು ತಿರಸ್ಕರಿಸಿ ಎಂದು ಹೇಳುತ್ತಾರಲ್ಲ ಇದರಿಂದ ಬಿಜೆಪಿಯವರು ಬಡವರ ವಿರೋಧಿಯೆಂದು ಮತ್ತೆ ಮತ್ತೆ ಸಾಬಿತುಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಜಗದೀಶ ಗೌಡರ, ಉಪಾಧ್ಯಕ್ಷ ಗಣೇಶ ದಾವಣಗೆರೆ, ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡುರು,ಗ್ಯಾರಂಟಿ ತಾಲೂಕಾಧ್ಯಕ್ಷೆ ಸುಮಾ ಉಗ್ರಾಣಕರ್, ಸಾಮಾಜಿಕ ಜಾಲಾತಾಣದ ಉಪಾಧ್ಯಕ್ಷ ಶೈಲೇಶ್ ಜೋಗಳೇಕರ್,ನಗರಸಭಾ ಸದಸ್ಯೆ ಶಮಿಮಾಬಾನು ಮುಂತಾದವರು ಉಪಸ್ಥಿತರಿದ್ದರು.