• Slide
    Slide
    Slide
    previous arrow
    next arrow
  • ದಿ ಕಾಶ್ಮೀರ್ ಫೈಲ್ಸ್ʼ ಬಗ್ಗೆ ಕೇಜ್ರಿವಾಲ್‌ ವ್ಯಂಗ್ಯ ಹೇಳಿಕೆ; ಕಾಶ್ಮೀರಿ ಪಂಡಿತರ ಆಕ್ರೋಶ

    300x250 AD

    ನವದೆಹಲಿ: 1990ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂವೇದನ ರಹಿತವಾದ ಮತ್ತು ವ್ಯಂಗ್ಯ ಭರಿತ ಹೇಳಿಕೆಯನ್ನು ನೀಡಿದ್ದು ಇದು ಕಾಶ್ಮೀರಿ ಪಂಡಿತ ಸಮುದಾಯವನ್ನು ಆಕ್ರೋಶಿತರನ್ನಾಗಿ ಮಾಡಿದೆ.

    ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸುವ ಬದಲು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿ ಎಲ್ಲರಿಗೂ ಉಚಿತವಾಗಿ ತೋರಿಸಬಹುದಲ್ಲವೇ ಎಂದಿದ್ದಾರೆ.

    ಅಲ್ಲದೆ ಸಿನಿಮಾವನ್ನು ಒಂದು ಸುಳ್ಳು ಸಿನಿಮಾ ಎಂದು ಅವರು ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರ ಈ ವರ್ತನೆಗೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಸುಟ್ಟುಹೋದ ತಮ್ಮ ಮನೆಗಳ ಫೋಟೋಗಳನ್ನು ಹಂಚಿಕೊಂಡು ಕೇಜ್ರಿವಾಲ್ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.

    300x250 AD

    ಉತ್ಪಲ್ ಎಂಬವರು ಟ್ವೀಟ್ ಮಾಡಿ, “ಕಾಶ್ಮೀರದಲ್ಲಿನ ನನ್ನ ಮನೆ 14 ಕೋಣೆಗಳನ್ನು ಹೊಂದಿತ್ತು ಮತ್ತು ಮತ್ತು ಕಾಶ್ಮೀರದ ಇತಿಹಾಸ ಮತ್ತು ಸಂಸ್ಕೃತಿಯ ಬಗೆಗಿನ 5000 ಪುಸ್ತಕಗಳನ್ನು ಹೊಂದಿತ್ತು. 1990 ರಲ್ಲಿ ಉಗ್ರವಾದಿಗಳು ಈ ಮನೆಯನ್ನು ಸುಟ್ಟುಹಾಕಿದರು” ಎಂದಿದ್ದಾರೆ.

    ಮತ್ತೊಬ್ಬರು ಟ್ವಿಟ್ ಮಾಡಿ, ಈ ಸಿನಿಮಾ ನಮ್ಮ ಕಾಶ್ಮೀರಿ ಹಿಂದುಗಳ ನರಮೇಧದ ಸತ್ಯ ಘಟನೆಯನ್ನು ಆಧರಿಸಿದೆ ಎಂದಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top