Slide
Slide
Slide
previous arrow
next arrow

ಭಾರತಕ್ಕೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿ

300x250 AD

ನವದೆಹಲಿ: ಗಾಲ್ವಾನ್‌ ಘರ್ಷಣೆ ಬಳಿಕ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಭಾರತ ಮತ್ತು ಚೀನಾ ನಡುವಿನ ಮೊದಲ ಉನ್ನತ ಮಟ್ಟದ ಭೇಟಿಗಾಗಿ ಗುರುವಾರ ಸಂಜೆ ದೆಹಲಿಗೆ ಬಂದಿಳಿದಿದ್ದಾರೆ.

ವಾಂಗ್ ಅವರು ಅಫ್ಘಾನಿಸ್ಥಾನದ ಕಾಬೂಲ್‌ಗೆ ಆಗಮಿಸಿ ಅಲ್ಲಿ ತಾಲಿಬಾನ್‌ ಮುಖಂಡರೊಂದಿಗೆ ಮಾತುತೆ ನಡೆಸಿದ್ದರು. ನಂತರ ಅಲ್ಲಿಂದ ನವದೆಹಲಿಗೆ ಆಗಮಿಸಿದ್ದಾರೆ. ಇಂದು ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ.

ಚೀನಾದ ವಿದೇಶಾಂಗ ಸಚಿವರ ಭೇಟಿಯು ದ್ವಿಪಕ್ಷೀಯ ಬಾಂಧವ್ಯಕ್ಕಿಂತ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ಉದ್ಭವಿಸಿದ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.

300x250 AD

ವಿಶೇಷವೆಂದರೆ, ವಾಂಗ್ ಅವರ ಭೇಟಿಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ಚೀನಾ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಎರಡೂ ಕಡೆಯವರು ಭೇಟಿಯನ್ನು ಮುಚ್ಚಿಟ್ಟಿದ್ದರು.

ಉಭಯ ದೇಶಗಳ ನಡುವಿನ ಗಡಿ ಮಾತುಕತೆಗಾಗಿ ವಿಶೇಷ ಪ್ರತಿನಿಧಿಗಳಾಗಿ (ಎಸ್‌ಆರ್) ಸೇವೆ ಸಲ್ಲಿಸುತ್ತಿರುವ ವಾಂಗ್ ಮತ್ತು ದೋವಲ್ ನಡುವಿನ ಸಭೆಯಲ್ಲಿ ಗಡಿ ಸಮಸ್ಯೆಯು ಉಲ್ಲೇಖಾಗುವ ಸಾಧ್ಯತೆಯಿದೆ.

Share This
300x250 AD
300x250 AD
300x250 AD
Back to top