ಶಿರಸಿ: ತಾಲೂಕಿನ ಮಾವಿನಕೊಪ್ಪದ ವಿಕಾಸ ಹೆಗಡೆ ಮನೆಯಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ಸೌರಶಕ್ತಿ ಚಾಲಿತ ಶೀತಲೀಕರಣ ಘಟಕ(Solar Cold Storage) ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಶೀತಲೀಕರಣ ಘಟಕದ ಉದ್ಘಾಟನೆಯನ್ನು ಸೆಲ್ಕೊ ಇಂಡಿಯಾದ ಸಂಸ್ಥಾಪಕರು ಹಾಗೂ ಸೆಲ್ಕೊ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಕರಾಗಿರುವ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆ, ಸೆಲ್ಕೋ ಇಂಡಿಯಾದ ಮುಖ್ಯಕಾರ್ಯನಿರ್ವಾಹಕರಾಗಿರುವ ಮೋಹನ ಭಾಸ್ಕರ ಹೆಗಡೆ, ಹಾಗೂ ನೆದರಲ್ಯಾಂಡ್‌ನ ಜೆಪರೀ ಪ್ರಿನ್ಸ ನೆರವೇರಿಸಲಿದ್ದಾರೆ.
ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಭಟ್,ಮಹತೀ ಎಂಟರ್‌ಪ್ರೈಸಸ್ ಸಂಸ್ಥಾಪಕ ನಾಗರಾಜ ಜೋಶಿ ಸೋಂದಾ,ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಪ್ರಾಧ್ಯಾಪಕ ಗೋಪಾಲಕೃಷ್ಣ ಹೆಗಡೆ, ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ,ಹಾಗೂ ಉತ್ತರಕನ್ನಡ ಸಾವಯವ ಒಕ್ಕೂಟದ ನಿರ್ದೇಶಕರು, ಸೆಲ್ಕೊ ಫೌಂಢಶನ್ ಅಧಿಕಾರಿಗಳು,ಊರನಾಗರಿಕರು ಉಪಸ್ಥಿತರಿರುವರು.
ಈ ಶೀತಲೀಕರಣ ಘಟಕವು 20 ಮೆಟ್ರಿಕ್ ಟನ್ ಸಾಮರ್ಥ್ಯದ್ದಾಗಿದ್ದು ಸಂಪೂರ್ಣವಾಗಿ ಸೌರಶಕ್ತಿ ಆಧಾರದ ಮೇಲೆ ನಡೆಯಲಿದ್ದು, ಸೆಲ್ಕೊ ಫೌಂಡೇಶನ್ ಇವರ ಸಹಕಾರದೊಂದಿಗೆ ವಿಕಾಸ ಹೆಗಡೆ ಮಾವಿನಕೊಪ್ಪ ಇವರ ಮನೆಯಲ್ಲಿ ನಿರ್ಮಿಸಲಾಗಿದೆ.