Slide
Slide
Slide
previous arrow
next arrow

ಗ್ಯಾರಂಟಿ ಯೋಜನೆಯಿಂದ ಬಡತನ ಸಮಸ್ಯೆ ನಿವಾರಣೆ ಸಾಧ್ಯ: ಮಂಜುನಾಥ ಭಂಡಾರಿ

300x250 AD

ಕುಮಟಾ: ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಕರ್ನಾಟಕ ರಾಜ್ಯಗಳಲ್ಲಿ ೧ ಕೋಟಿ ೬೭ ಲಕ್ಷ ಕುಟುಂಬಗಳು ಫಲಾನುಭವಿಗಳಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.

 ಅವರು ಕುಮಟಾ ತಾಲೂಕಿನ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಯ ವಿವಿಧ ಬ್ಲಾಕ್ ಕಾಂಗ್ರೇಸನ ಉಸ್ತುವಾರಿಗಳ ಕಾರ್ಯ ಪರಿಶೀಲನೆಯ ಸಭೆಯಲ್ಲಿ ಮೇಲಿನಂತೆ ಹೇಳಿದರು.

 ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಯು ಬಡತನ ರೇಖೆ ನಿವಾರಿಸಲು ಪರಿಣಾಮಕಾರಿ ಕಾರ್ಯಕ್ರಮವಾಗಿದ್ದು, ಈ ಯೋಜನೆಯಿಂದ ಕರ್ನಾಟಕದಲ್ಲಿ ಒಂದು ಕೋಟಿ ಏಳು ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಮೇಲ್ಮಟ್ಟಕ್ಕೆ ಬಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಗಳ ಕುರಿತು ವ್ಯಾಪಕವಾಗಿ ವಿವಿಧ ತಾಲೂಕಿನ ಚುನಾವಣಾ ಪ್ರಚಾರದ ಉಸ್ತುವಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು.

300x250 AD

 ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ, ವಿವಿಧ ತಾಲೂಕಿನ ಉಸ್ತುವಾರಿಗಳಾದ ಅಬ್ಬಾಸ್ ತೊಣ್ಸೆ, ಲಾರೇನ್ ಸಿದ್ಧಿ, ಡಿ.ಎನ್.ಗಾಂವಕರ್, ಜಿ.ಎಮ್.ಶೆಟ್ಟಿ, ಸದಾನಂದ ದಬಗಾರ್, ಹೆಚ್.ಎಮ್.ನಾಯ್ಕ, ಎಸ್ ಕೆ ಭಾಗವತ, ಮಂಜುನಾಥ ಎನ್. ನಾಯ್ಕ, ಜ್ಯೋತಿ ಗೌಡ, ಶ್ರೀಪಾದ ಹೆಗಡೆ ಕಡವೆ, ಹೊನ್ನಪ್ಪ ನಾಯ್ಕ, ಕೆ.ಜಿ. ನಾಗರಾಜ, ಮಜೀದ್, ರವಿ ನಾಯ್ಕ ಕಲಕರಡಿ, ಎಮ್‌.ಆರ್.ನಾಯ್ಕ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top