• Slide
  Slide
  Slide
  previous arrow
  next arrow
 • ಏರ್ ಇಂಡಿಯಾವನ್ನು ವಿಶ್ವ ದರ್ಜೆಗೇರಿಸಲು ಬದ್ಧ: ಟಾಟಾ ಸನ್ಸ್‌ ಅಧ್ಯಕ್ಷ

  300x250 AD

  ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಇತ್ತೀಚೆಗೆ ಏರ್ ಇಂಡಿಯಾ ಸಿಬ್ಬಂದಿಗೆ ಸಂದೇಶವನ್ನು ನೀಡಿದ್ದು, ಏರ್ ಇಂಡಿಯಾವನ್ನು ವಿಶ್ವ ದರ್ಜೆಗೆ ತರಲು ಟಾಟಾ ಗ್ರೂಪ್ ಬದ್ಧವಾಗಿದೆ. ಗ್ರಾಹಕ ಸೇವೆಯಲ್ಲಿ ಏರ್ ಇಂಡಿಯಾವನ್ನು ಅತ್ಯುತ್ತಮವಾಗಿಸಲು  ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

  “ಗ್ರಾಹಕ ಸೇವೆಯಲ್ಲಿ ಏರ್‌ ಇಂಡಿಯಾ ಅತ್ಯುತ್ತಮವಾಗಿ ಇರಬೇಕು ಮತ್ತು ಏರ್‌ ಇಂಡಿಯಾ ವಿಶ್ವದ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ವಿಮಾನಯಾನ ಸಂಸ್ಥೆಯಾಗಬೇಕೆಂದು ನಾವು ಬಯಸುತ್ತೇವೆ” ಎಂದು ಎನ್ ಚಂದ್ರಶೇಖರನ್ ಹೇಳಿದ್ದಾರೆ.

  ಏರ್ ಇಂಡಿಯಾವನ್ನು ಜನವರಿ 27 ರಂದು ಟಾಟಾ ಗ್ರೂಪ್‌ಗೆ ಹಸ್ತಾಂತರಿಸಲಾಯಿತು, ವಿಮಾನಯಾನವು 69 ವರ್ಷಗಳ ನಂತರ ಟಾಟಾಗೆ ಹಿಂದಿರುಗಿರುವುದು ಹೆಮ್ಮೆಯ ಕ್ಷಣ. ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಸರ್ಕಾರವು ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ನ ಭಾಗವಾಗಿರುವ ಟಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ 18,000 ಕೋಟಿ ರೂ.ಗೆ ಮಾರಾಟ ಮಾಡಿತು.

  300x250 AD

  ಇದಕ್ಕೂ ಮೊದಲು, ಟಾಟಾ ಗ್ರೂಪ್ ಅಧ್ಯಕ್ಷ  ರತನ್ ಟಾಟಾ ಮಾತನಾಡಿ, “ಟಾಟಾ ಗ್ರೂಪ್ ಏರ್ ಇಂಡಿಯಾದ ಹೊಸ ಗ್ರಾಹಕರನ್ನು ಸ್ವಾಗತಿಸುತ್ತದೆ ಮತ್ತು ಪ್ರಯಾಣಿಕರ ಸೌಕರ್ಯ ಮತ್ತು ಸೇವೆಯ ವಿಷಯದಲ್ಲಿ ಏರ್ ಇಂಡಿಯಾವನ್ನು ಆಯ್ಕೆಯ ಏರ್‌ಲೈನ್ ಮಾಡಲು ಒಟ್ಟಾಗಿ ಕೆಲಸ ಮಾಡಲು ಉತ್ಸುಕವಾಗಿದೆ” ಎಂದು ಹೇಳಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top