Slide
Slide
Slide
previous arrow
next arrow

ಯೋಧರ ತ್ಯಾಗ ಬಲಿದಾನವನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ;ಪ್ರಧಾನಿ ಮೋದಿ

300x250 AD

ಪಠಾಣ್‌ಕೋಟ್: 2016ರ ಪಠಾಣ್‌ಕೋಟ್ ದಾಳಿಯ ವೇಳೆ ಹುತಾತ್ಮರಾದ ಯೋಧರ ತ್ಯಾಗ ಬಲಿದಾನವನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಮತ್ತು ಅವಮಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಆರೋಪಿಸಿದ್ದಾರೆ.

ಪಠಾಣ್‌ಕೋಟ್ ದಾಳಿಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ದೇಶವೇ ಒಟ್ಟಾಗಿದೆ. ಕಾಂಗ್ರೆಸ್ಸಿಗರು ಸರ್ಕಾರವನ್ನು, ಪಂಜಾಬ್‌ನ ಜನರನ್ನು ಮತ್ತು ನಮ್ಮ ಸೇನೆಯನ್ನು  ಪ್ರಶ್ನಿಸಿದೆ. ಅವರು ಸೈನಿಕರ ತ್ಯಾಗವನ್ನು ಕಡೆಗಣಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

2019ರ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿಯೂ ಕಾಂಗ್ರೆಸ್ ಅವಮಾನಿಸುವ ಕೆಲಸವನ್ನೇ ಮಾಡಿದೆ ಎಂದ ಪ್ರಧಾನಿ, ಪುಲ್ವಾಮಾ ವಾರ್ಷಿಕೋತ್ಸವದಂದು ಸಹ ಅವರು ತಮ್ಮ ‘ಪಾಪ್ ಲೀಲಾ’ವನ್ನು ಮುಂದುವರೆಸಿದ್ದಾರೆ ಎಂದಿದ್ದಾರೆ.

300x250 AD

ಫೆಬ್ರವರಿ 14, 2019 ರಂದು, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ನ ಬೆಂಗಾವಲು ಪಡೆ ಮೇಲೆ ದಾಳಿ ಮಾಡಿ 40 ಪಡೆಯ ಸಿಬ್ಬಂದಿಯನ್ನು ಕೊಂದಿತ್ತು.

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ನಡೆಸಿದ “ಸರ್ಜಿಕಲ್ ಸ್ಟ್ರೈಕ್” ನಡೆಸಿದ ಕುರಿತು ಪ್ರಶ್ನೆಗಳನ್ನು ಮಾಡುವ ಮೂಲಕ ಸೇನೆಯನ್ನು ಅವಮಾನಿಸಿದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ  ಟೀಕೆಗೆ ಗುರಿಯಾಗಿದ್ದಾರೆ.

Share This
300x250 AD
300x250 AD
300x250 AD
Back to top