• Slide
    Slide
    Slide
    previous arrow
    next arrow
  • ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಆರಂಭ

    300x250 AD

    ಲಕ್ನೋ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ. 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ನಡೆಯಲಿದೆ.

    ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.

    ಮೊದಲ ಹಂತದಲ್ಲಿ 73 ಮಹಿಳೆಯರು ಸೇರಿದಂತೆ ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ ಸುಮಾರು 2 ಕೋಟಿ 28 ಲಕ್ಷ ಮತದಾರರು ಮತದಾನ ಮಾಡುವ ನಿರೀಕ್ಷೆಯಿದೆ. ಇವರಲ್ಲಿ 1.24 ಕೋಟಿ ಪುರುಷರು, 1.04 ಕೋಟಿ ಮಹಿಳೆಯರು ಮತ್ತು 1,448 ತೃತೀಯಲಿಂಗಿ ಮತದಾರರು ಸೇರಿದ್ದಾರೆ.

    300x250 AD

    ಇಂದು ರಾಜ್ಯದಲ್ಲಿ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಕೋವಿಡ್-ಸುರಕ್ಷಿತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಸೌಲಭ್ಯಗಳು ಮತ್ತು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಇಂದು ಚುನಾವಣೆ ನಡೆಯುತ್ತಿರುವ ಜಿಲ್ಲೆಗಳೆಂದರೆ ಶಾಮ್ಲಿ (ಪ್ರಬುದ್ಧ ನಗರ), ಮೀರತ್, ಹಾಪುರ್ (ಪಂಚಶೀಲ್ ನಗರ), ಮುಜಾಫರ್‌ನಗರ, ಬಾಗ್‌ಪತ್, ಗಾಜಿಯಾಬಾದ್, ಬುಲಂದ್‌ಶಹರ್, ಅಲಿಗಢ, ಆಗ್ರಾ, ಗೌತಮ್ ಬುದ್ಧ ನಗರ ಮತ್ತು ಮಥುರಾ.
    ಈ ರಾಜ್ಯದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top