Slide
Slide
Slide
previous arrow
next arrow

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಹಿಮಾವೃತ ಕಾಶ್ಮೀರ

300x250 AD

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇದೀಗ ಮತ್ತೆ ಪುನಃಶ್ಚೇತನವನ್ನು ತೋರಿಸುತ್ತಿದೆ.

ಏಪ್ರಿಲ್ 2021 ರಿಂದ ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕಣಿವೆಗೆ ಭೇಟಿ ನೀಡಿದ್ದಾರೆ, ಅದರಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಚಳಿಗಾಲದ ಅವಧಿಯಲ್ಲಿ ಗುಲ್ಮಾರ್ಗ್‌ಗೆ ಆಗಮಿಸಿದ್ದಾರೆ. ಕಾಶ್ಮೀರಕ್ಕೆ ಪ್ರತಿದಿನ ಸುಮಾರು 3,000-4,000 ಪ್ರವಾಸಿಗರು ಆಗಮಿಸುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಕಾಶ್ಮೀರದ ಪ್ರಸಿದ್ಧ ಸ್ಕೀ ರೆಸಾರ್ಟ್ ಗುಲ್ಮಾರ್ಗ್‌ಗೆ ಭೇಟಿ ನೀಡುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಭಾರೀ ಜನದಟ್ಟಣೆಯನ್ನು ಕಂಡು ಉಲ್ಲಾಸಿತಗೊಂಡಿರುವ ಜಮ್ಮು-ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಮುಂಬರುವ ಋತುಗಳಿಗಾಗಿ ಸಜ್ಜಾಗಿದೆ ಮತ್ತು  ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗದಂತೆ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ

300x250 AD

“ಕೋವಿಡ್ -19 ಬಳಿಕ ಪ್ರವಾಸಿಗರ ಹರಿವು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ವಸಂತ ಋತುವಿನಲ್ಲಿ  ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡಲು ನಾವು ಯೋಜಿಸಿದ್ದೇವೆ” ಎಂದು ಇಲಾಖೆ ಮುಖ್ಯಸ್ಥರು ಹೇಳಿದ್ದಾರೆ.

ಗುಲ್ಮಾರ್ಗ್ ಹಿಮದ ಬಿಳಿ ಹೊದಿಕೆಯಿಂದ ಆವೃತವಾಗಿದೆ, ಪ್ರವಾಸಿಗರು ಹವಾಮಾನ ಸೌಂದರ್ಯದೊಂದಿಗೆ ನೆಲೆಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಹಲವರು ಸ್ಕೀಯಿಂಗ್, ಗೊಂಡೊಲಾ ರೈಡ್ ಮತ್ತು ಸ್ಲೆಡ್ಜ್ ರೈಡ್ ಮಾಡುತ್ತಾ ಹಿಮದಿಂದ ಆವೃತವಾದ ಇಳಿಜಾರುಗಳನ್ನು ಆನಂದಿಸುತ್ತಿದ್ದಾರೆ ಎಂದಿದ್ದಾರೆ.

Share This
300x250 AD
300x250 AD
300x250 AD
Back to top